ETV Bharat / crime

ದೇಗುಲದ ಆವರಣದಲ್ಲೇ ರಕ್ತಸಿಕ್ತ ಸ್ಥಿತಿಯಲ್ಲಿ ಅರ್ಚಕನ ಮೃತದೇಹ ಪತ್ತೆ - Shivpuri village in outskirts of Lucknow

ಉತ್ತರ ಪ್ರದೇಶದ ಲಖನೌನಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಅರ್ಚಕನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Body of priest found in Lucknow temple premises
ದೇಗುಲದ ಆವರಣದಲ್ಲೇ ರಕ್ತಸಿಕ್ತ ಸ್ಥಿತಿಯಲ್ಲಿ ಅರ್ಚಕನ ಮೃತದೇಹ ಪತ್ತೆ
author img

By

Published : Jan 21, 2021, 10:54 AM IST

ಲಖನೌ (ಉತ್ತರ ಪ್ರದೇಶ): ಲಖನೌ ಹೊರವಲಯದಲ್ಲಿನ ಶಿವಪುರಿ ಗ್ರಾಮದಲ್ಲಿನ ದೇವಸ್ಥಾನದ ಆವರಣದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಅರ್ಚಕನ ಮೃತದೇಹ ಪತ್ತೆಯಾಗಿದ್ದು, ಜನರು ಭಯಭೀತರಾಗಿದ್ದಾರೆ.

ಫಕೀರ್​ ದಾಸ್​ (80) ಮೃತ ಅರ್ಚಕ. ಬಿಕೆಟಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದೇಗುಲದ ವಸ್ತುಗಳು ಅಥವಾ ಕಾಣಿಕೆ ಹುಂಡಿಯಲ್ಲಿನ ಹಣ ಯಾವುದೂ ಕಳ್ಳತನವಾಗಿಲ್ಲ. ಹೀಗಾಗಿ ಅರ್ಚಕನ ಮೇಲಿನ ದ್ವೇಷಕ್ಕೆ ದುಷ್ಕರ್ಮಿಗಳು ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಹಸಿವು, ದಣಿವಿನಿಂದ ಬಳಲಿ ಸಾವನ್ನಪ್ಪಿದ 80 ವರ್ಷದ ವೃದ್ಧ

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿರುವುದಾಗಿ ಲಖನೌ ಗ್ರಾಮೀಣ ಪೊಲೀಸ್​ ವರಿಷ್ಠಾಧಿಕಾರಿ ಹಿರ್ದೇಶ್​ ಕುಮಾರ್​ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.