ETV Bharat / crime

ಕಾರ್ಪೊರೇಟರ್​ಗೆ ಲೈಂಗಿಕ ಕಿರುಕುಳ ಯತ್ನ, ಬಿಜೆಪಿ ಕಾರ್ಪೋರೇಟರ್ ಬಂಧನ: ಅನಿಲ್ ದೇಶ್​ಮುಖ್​​

ಮಹಿಳಾ ಪಾಲಿಕೆ ಸದಸ್ಯೆಗೆ ಲೈಂಗಿಕ ಕಿರುಕುಳ ಆರೋಪದಲ್ಲಿ ಬಿಜೆಪಿ ಕಾರ್ಪೊರೇಟರ್​ನನ್ನ ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​​ಮುಖ್ ಮಾಹಿತಿ ನೀಡಿದ್ದಾರೆ.

BJP corporator arrested in molestation case: Deshmukh
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​​ಮುಖ್
author img

By

Published : Mar 5, 2021, 2:09 AM IST

Updated : Mar 5, 2021, 5:30 AM IST

ಮುಂಬೈ: ಮಹಿಳಾ ಕಾರ್ಪೋರೇಟರ್​ಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪದಲ್ಲಿ ಮುರ್ಬಾದ್​ ನಗರದ ಬಿಜೆಪಿ ಕಾರ್ಪೋರೇಟರ್​​​ನನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ಗುರುವಾರ ಮಾಹಿತಿ ನೀಡಿದ್ದಾರೆ.

ವಿಧಾನ ಪರಿಷತ್​ನಲ್ಲಿ ಮಾತನಾಡುವ ವೇಳೆ ಈ ಬಗ್ಗೆ ಮಾಹಿತಿ ನೀಡಿದ ಅನಿಲ್ ದೇಶ್​ಮುಖ್, ಕಾರ್ಪೊರೇಟರ್​ ನಿತಿನ್ ತೆಲವಾನೆ ಬುಧವಾರ ರಾತ್ರಿ 12.40ಕ್ಕೆ ಮಹಿಳಾ ಕಾರ್ಪೊರೇಟರ್ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ರಾಹುಲ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿಯಿಂದ ದೂರು

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್​​ 452 (ಮನಗೆ ಅತಿಕ್ರಮ ಪ್ರವೇಶ), 354 (ಹಿಂಸೆ), 354ಎ (ಲೈಂಗಿಕ ಕಿರುಕುಳ) ಮತ್ತು 506 (ಬೆದರಿಕೆ) ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅನಿಲ್ ದೇಶ್​​ಮುಖ್ ಹೇಳಿದ್ದಾರೆ.

ಇದರ ಜೊತೆಗೆ ಜಲಗಾಂವ್​ನ ಹಾಸ್ಟೆಲ್​ನ ಯುವತಿಯರಿಗೆ ಪೊಲೀಸರು ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇದು ಆಧಾರ ರಹಿತವಾಗಿದ್ದು, ಇಂಥಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

Last Updated : Mar 5, 2021, 5:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.