ETV Bharat / crime

ಕೇಂದ್ರ ಸಚಿವ ನಿತ್ಯಾನಂದ ರಾಯ್​ ಹತ್ಯೆಗೆ ಸಂಚು ರೂಪಿಸಿದ್ದ ಯುವಕ ಅರೆಸ್ಟ್​..!

ಮಹಾಶಿವರಾತ್ರಿ ಹಬ್ಬದಂದು ಕೇಂದ್ರ ಸಚಿವ ನಿತ್ಯಾನಂದ ರಾಯ್​ ಹತ್ಯೆಗೆ ಸಂಚು ರೂಪಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ವೈರಲ್ ಆದ ವಿಡಿಯೋ ದೃಶ್ಯಾವಳಿಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಅರೆಸ್ಟ್​ ಮಾಡಿದ್ದಾರೆ.

Plot to kill Nityanand Rai Vaishali foiled
ಕೇಂದ್ರ ಸಚಿವ ನಿತ್ಯಾನಂದ ರೈ ಹತ್ಯೆಗೆ ಸಂಚು ರೂಪಿಸಿದ್ದ ಯುವಕ ಅರೆಸ್ಟ್
author img

By

Published : Feb 14, 2023, 8:31 PM IST

ವೈಶಾಲಿ (ಬಿಹಾರ): ಕೇಂದ್ರ ಸಚಿವ ನಿತ್ಯಾನಂದ ರೈ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಯನ್ನು ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರ ಪ್ರದೇಶದಲ್ಲಿ ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಆರೋಪಿ ಮಾಧವ್ ಕುಮಾರ್ ಅಲಿಯಾಸ್ ಮಾಧವ್ ಝಾ ಎಂಬಾತನನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ವೈಶಾಲಿ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಸ್ಪಷ್ಟಪಡಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಬಂಧನ: ಖಚಿತ ಮಾಹಿತಿ ಆಧರಿಸಿದ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ ಬಳಿಕ ಸಂಪೂರ್ಣ ವಿಷಯ ತಿಳಿಯಲಿದೆ ಎಂದು ಎಸ್ಪಿ ಮನೀಶ್ ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮೂರ್ನಾಲ್ಕು ಯುವಕರು ಕೋಣೆಯಲ್ಲಿ ಕುಳಿತಿರುವುದು ಕಂಡುಬಂದಿದೆ. ಫೆಬ್ರವರಿ 18ರಂದು ನಡೆಯಲಿರುವ ಮಹಾಶಿವರಾತ್ರಿ ಮೆರವಣಿಗೆಯಲ್ಲಿ ಕೇಂದ್ರ ಸಚಿವ ನಿತ್ಯಾನಂದ ರೈ ಅವರನ್ನು ಕೊಲ್ಲಲು ಅವರು ಚರ್ಚಿಸುತ್ತಿದ್ದರು. ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನು ಓದಿ:ಆಂಧ್ರ ಸಿಎಂ ನಿವಾಸದ ಕೂಗಳತೆಯಲ್ಲಿ ದೃಷ್ಟಿವಿಕಲಚೇತನ ಬಾಲಕಿಗೆ ಚಾಕು ಇರಿತ,ಸಾವು: ಆರೋಪಿ ಬಂಧಿಸದ ಪೊಲೀಸರ ವಿರುದ್ಧ ಆಕ್ರೋಶ

ವೈಶಾಲಿಯ ಹಾಜಿಪುರ ಪ್ರದೇಶದಲ್ಲಿ ಪ್ರತಿ ವರ್ಷ ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಭಗವಾನ್ ಶಿವನ ಮದುವೆ ಮೆರವಣಿಗೆಯನ್ನು ಹೊರತರಲಾಗುತ್ತದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಾಧವ್ ಝಾ ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ಕೇಂದ್ರ ಸಚಿವರ ಮೇಲೆ ಗುಂಡು ಹಾರಿಸಲು ಸಂಚು ರೂಪಿಸುತ್ತಿರುವ ಕುರಿತು ಪೊಲೀಸರು ಪತ್ತೆ ಮಾಡಿದ್ದಾರೆ.

ಆರೋಪಿ ಪೊಲೀಸರ ಎದುರು ಬಾಯಿಬಿಟ್ಟಿದ್ದು ಏನು?: "ನನ್ನ ಕನಸಿನಲ್ಲಿ, ನಾನು ಮಹಾಶಿವರಾತ್ರಿ ಹಬ್ಬದ ಸಮಯದಲ್ಲಿ ಸಚಿವ ನಿತ್ಯಾನಂದ ರೈ ಅವರನ್ನು ಹತ್ಯೆ ಮಾಡುತ್ತಿದ್ದೆ. ಕಳೆದ ಮೂರು ವರ್ಷಗಳಿಂದ ನನಗೆ ಇದೇ ಕನಸು ಬೀಳುತ್ತಿದೆ" ಎಂದು ಆರೋಪಿ ಪೊಲೀಸರ ಎದುರು ಬಾಯಿಬಿಟ್ಟಿದ್ದಾನೆ. ಆದರೆ, ಅವನ ಸ್ನೇಹಿತರೊಬ್ಬರು ಈ ವಿಷಯದ ಬಗ್ಗೆ ಏನನ್ನೂ ಹೇಳದಂತೆ ತಡೆದಿದ್ದರು. ಮಾಧವ್ ಮೂಲ ಸ್ಥಳ ಬಿಹಾರದ ವೈಶಾಲಿ ಜಿಲ್ಲೆ. ಕೇಂದ್ರ ಸಚಿವ ನಿತ್ಯಾನಂದ ರೈ ಕೂಡಾ ಇದೇ ಜಿಲ್ಲೆಯ ಹಾಜಿಪುರ ಪ್ರದೇಶಕ್ಕೆ ಸೇರಿದವರು. ಇದರಿಂದ ಫೆಬ್ರವರಿ 18ರಂದು ನಡೆಯುವ ಶಿವರಾತ್ರಿ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇದನ್ನು ಓದಿ:ಏಳು ಭಯೋತ್ಪಾದಕರನ್ನು ಹತ್ಯೆ ಮಾಡಿದ ಪಾಕಿಸ್ತಾನದ ಭದ್ರತಾ ಪಡೆ

ಪೊಲೀಸರ ಕಾರ್ಯಾಚರಣೆ: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. "ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳ ಪೂರ್ವಾಪರ ಪರಿಶೀಲಿಸುತ್ತಿದ್ದೇವೆ'' ವೈಶಾಲಿ ಪಟ್ಟಣ ಪೊಲೀಸ್ ಠಾಣೆಯ ಎಸ್‌ಎಚ್‌ಒ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶ್ರದ್ಧಾ ಮರ್ಡರ್ ರೀತಿಯ ಮತ್ತೊಂದು ಘಟನೆ: ಪ್ರೇಯಸಿ ಕೊಲೆ ಮಾಡಿ ಫ್ರಿಜ್​ನಲ್ಲಿ ಶವ ಬಚ್ಚಿಟ್ಟ ಯುವಕ!

ಇದನ್ನು ಓದಿ: ಆತ್ಮಹತ್ಯೆಯಲ್ಲೂ ಸಾರ್ಥಕತೆ ಮೆರೆದ ಯುವಕ: ಶಾಲೆಗಾಗಿ ಆಸ್ತಿ ದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.