ಭರತ್ಪುರ (ರಾಜಸ್ಥಾನ): ಭರತ್ಪುರ ಕ್ಷೇತ್ರದ ಬಿಜೆಪಿ ಸಂಸದೆ ರಂಜಿತಾ ಕೋಲಿ ಅವರ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಪ್ರಜ್ಞಾಹೀನರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ರಾತ್ರಿ ಧಾರ್ಸೋನಿ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಹೋಗುತ್ತಿದ್ದ ವೇಳೆ ಐದರಿಂದ ಆರು ಮಂದಿ ಬಂದು ಕಾರಿನ ಮೇಲೆ ಕಲ್ಲು ತೂರಿ ದಾಳಿ ನಡೆಸಿದ್ದಾರೆ. ನನಗೆ ಯಾರ ಮೇಲೂ ದ್ವೇಷವಿಲ್ಲ. ಹಲ್ಲೆ ಮಾಡಿದವರು ಅಪರಿಚಿತ ಜನರಾಗಿದ್ದು, ಅವರ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ರಂಜಿತಾ ಕೋಲಿ ಹೇಳಿದ್ದಾರೆ.
ಈ ಬಗ್ಗೆ ರಂಜಿತಾ ಅವರ ಟ್ವಿಟರ್ ಖಾತೆಯಲ್ಲಿ ಭರತ್ಪುರ ಸಂಸದೆಯ ತಂಡ ಮಾಹಿತಿ ಹಂಚಿಕೊಂಡಿದ್ದು, ಭರತ್ಪುರ ಆರ್‌ಬಿಎಂ ಆಸ್ಪತ್ರೆಯ ಪರಿಶೀಲನೆ ಬಳಿಕ ಸಂಸದದೆ ಶ್ರೀಮತಿ ರಂಜಿತಾ ಕೋಲಿ ಜೀ ಆರೋಗ್ಯ ಕೇಂದ್ರಕ್ಕೆ ತೆರಳುವ ವೇಳೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಬಂದು ಹಲ್ಲೆ ನಡೆಸಿದ್ದಾರೆ. ಈ ದಾಳಿ ಎಷ್ಟು ಭೀಕರವಾಗಿತ್ತೆಂದರೆ ಮೇಡಂ ಪ್ರಜ್ಞೆ ತಪ್ಪಿದ್ದಾರೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಲಾಯಿತಾದರೂ ಪೊಲೀಸರು ಘಟನಾ ಸ್ಥಳವನ್ನು ತಲುಪಲು 45 ನಿಮಿಷಗಳನ್ನು ತೆಗೆದುಕೊಂಡರು. ಮತ್ತೊಂದೆಡೆ ಜಿಲ್ಲಾಧಿಕಾರಿಯೂ ಫೋನ್ ಎತ್ತಲಿಲ್ಲ ಎಂದು ಹೇಳಿದ್ದಾರೆ.
-
हमला इतना भयावय था की सांसद महोदया अचेत होकर बेहोश हो गईं। पुलिस से संपर्क किया गया परंतु पुलिस को घटनास्थल तक पहुंचने में 45 मिनट लग गए, दूसरी ओर @BHARATPUR_DM को निरंतर फोन करने के बाद भी उनके द्वारा फोन नहीं उठाया गया।
— Ranjeeta Koli MP (@RanjeetaKoliMP) May 27, 2021 " class="align-text-top noRightClick twitterSection" data="
- टीम भरतपुर सांसद@ArunSinghbjp @v_shrivsatish @RajCMO
">हमला इतना भयावय था की सांसद महोदया अचेत होकर बेहोश हो गईं। पुलिस से संपर्क किया गया परंतु पुलिस को घटनास्थल तक पहुंचने में 45 मिनट लग गए, दूसरी ओर @BHARATPUR_DM को निरंतर फोन करने के बाद भी उनके द्वारा फोन नहीं उठाया गया।
— Ranjeeta Koli MP (@RanjeetaKoliMP) May 27, 2021
- टीम भरतपुर सांसद@ArunSinghbjp @v_shrivsatish @RajCMOहमला इतना भयावय था की सांसद महोदया अचेत होकर बेहोश हो गईं। पुलिस से संपर्क किया गया परंतु पुलिस को घटनास्थल तक पहुंचने में 45 मिनट लग गए, दूसरी ओर @BHARATPUR_DM को निरंतर फोन करने के बाद भी उनके द्वारा फोन नहीं उठाया गया।
— Ranjeeta Koli MP (@RanjeetaKoliMP) May 27, 2021
- टीम भरतपुर सांसद@ArunSinghbjp @v_shrivsatish @RajCMO
ಕೆಲ ಸಮಯದ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂಸದೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.