ETV Bharat / crime

ಬಾಸ್ಕೆಟ್​ ಬಾಲ್​​​ ಆಟಗಾರ್ತಿ ಮೇಲೆ ಅತ್ಯಾಚಾರ ಯತ್ನ: ಛಾವಣಿಯಿಂದ ಕೆಳಗೆ ತಳ್ಳಿ ದುಷ್ಕೃತ್ಯ - ಈಟಿವಿ ಭಾರತ ಕರ್ನಾಟಕ

ಬಾಸ್ಕೆಟ್ ಬಾಲ್​ ಆಟಗಾರ್ತಿಯೋರ್ವಳ ಮೇಲೆ ಮೂವರು ಕಾಮುಕರು ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಪಂಜಾಬ್​​ನಲ್ಲಿ ನಡೆದಿದೆ.

Basketball player tried to rape
Basketball player tried to rape
author img

By

Published : Aug 18, 2022, 5:20 PM IST

Updated : Aug 18, 2022, 6:14 PM IST

ಮೋಗಾ(ಪಂಜಾಬ್​): 18 ವರ್ಷದ ಬಾಸ್ಕೆಟ್​​ಬಾಲ್​ ಆಟಗಾರ್ತಿಯ ಮೇಲೆ ಮೂವರು ಕಾಮುಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಆಕೆಯನ್ನು ಕ್ರೀಡಾಂಗಣದ ಮೇಲ್ಛಾವಣಿಯಿಂದ ಕೆಳಗೆ ತಳ್ಳಿದ್ದಾರೆ. ಪಂಜಾಬ್​​ನ ಮೋಗಾ ಜಿಲ್ಲೆಯಲ್ಲಿ ಕಳೆದ ಆಗಸ್ಟ್​​ 12ರಂದು ಘಟನೆ ನಡೆದಿದೆ.

ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಆಟಗಾರ್ತಿ ಲುಧಿಯಾನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವತಿಯ ಎರಡೂ ಕಾಲುಗಳು ಹಾಗೂ ದವಡೆಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಗರ್ಭಿಣಿ ಬಾಲಕಿಗೆ ಥಳಿಸಿ, ವೈದ್ಯರಿಂದ ಗರ್ಭಪಾತ

ಸಂತ್ರಸ್ತೆಯ ತಂದೆ ಪ್ರತಿಕ್ರಿಯಿಸಿ, ಮಗಳು ಬಾಸ್ಕೆಟ್​ಬಾಲ್​ ಅಭ್ಯಾಸಕ್ಕಾಗಿ ಮೋಗಾದಲ್ಲಿನ ಕ್ರೀಡಾಂಗಣಕ್ಕೆ ಹೋಗಿದ್ದಳು. ಈ ವೇಳೆ ಮೂವರು ಆರೋಪಿಗಳು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಸುಮಾರು 25 ಅಡಿ ಎತ್ತರದ ಮೇಲ್ಛಾವಣಿಯಿಂದ ತಳ್ಳಿದ್ದಾರೆಂದು ಹೇಳಿದರು.

ಪ್ರಕರಣದಲ್ಲಿ ಜತಿನ್​ ಹಾಗೂ ಆತನ ಇಬ್ಬರು ಸಹಚರರು ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್​ 307(ಕೊಲೆ ಯತ್ನ), 376(ಅತ್ಯಾಚಾರ) ಸೇರಿದಂತೆ ಅನೇಕ ಸೆಕ್ಷನ್​​ಗಳಡಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Last Updated : Aug 18, 2022, 6:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.