ETV Bharat / crime

ಗೋವಾದಲ್ಲಿ ಬರ್ತ್​ಡೇ ಪಾರ್ಟಿ ಮಾಡಲು ದರೋಡೆಗಿಳಿದಿದ್ದ ಬಾಲಕರಿಬ್ಬರ ಬಂಧನ - arrest of two boys who robbed a birthday party

ತಾಂತ್ರಿಕ ಮತ್ತು ಮ್ಯಾನುವಲ್ ಕಣ್ಗಾವಲು ಆಧಾರದ ಮೇಲೆ, ಮೋಹನ್ ಗಾರ್ಡನ್ ಪ್ರದೇಶದ ಗಂಡಾ ನಾಲಾ ರಸ್ತೆಯಲ್ಲಿ ತಪಾಸಣೆ ಕೈಗೊಳ್ಳಲಾಯಿತು. ಸ್ವಲ್ಪ ಸಮಯದ ನಂತರ, ಇಬ್ಬರು ವ್ಯಕ್ತಿಗಳು ದ್ವಾರಕಾ ಮೋರ್ ಕಡೆಗೆ ಹೋಗುತ್ತಿರುವುದು ಕಂಡುಬಂದಿತ್ತು. ಆದರೆ, ಪೊಲೀಸರನ್ನು ನೋಡಿದ ತಕ್ಷಣ ಅವರು ಪರಾರಿಯಾಗಲು ಪ್ರಯತ್ನಿಸಿದ್ದರು. ಆದರೆ, ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೋವಾದಲ್ಲಿ ಬರ್ತ್​ಡೇ ಪಾರ್ಟಿ ಮಾಡಲು ದರೋಡೆಗಿಳಿದಿದ್ದ ಬಾಲಕರಿಬ್ಬರ ಬಂಧನ
http://10.10.50.90//IANS_ENGLISH/07-August-2022/34686ef0f919b1503ea6c21d64e56557_0708a_1659893423_463.jpg
author img

By

Published : Nov 3, 2022, 4:54 PM IST

ನವದೆಹಲಿ: ಗೋವಾದಲ್ಲಿ ಹುಟ್ಟುಹಬ್ಬದ ಪಾರ್ಟಿ ಆಯೋಜಿಸುವ ಯೋಜನೆಯೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯ ಹಲವೆಡೆ ದರೋಡೆಗಳನ್ನು ಎಸಗಿದ ಇಬ್ಬರು ಬಾಲಕರನ್ನು ದ್ವಾರಕಾ ಪ್ರದೇಶದಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳನ್ನು ರೋಹಿಣಿ ನಿವಾಸಿ ರೋಹಿತ್ ಮತ್ತು ವಿಕಾಸ್ ನಗರದ ಸೈನಿಕ್ ಎನ್‌ಕ್ಲೇವ್ ನಿವಾಸಿ ಬಾಬಿ ಎಂದು ಗುರುತಿಸಲಾಗಿದೆ.

ನಗರದಾದ್ಯಂತ ಸರಗಳ್ಳತನ, ಕಳ್ಳತನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾದ ತಲಾ 10 ಪ್ರಕರಣಗಳಲ್ಲಿ ಇವರಿಬ್ಬರೂ ಭಾಗಿಯಾಗಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಮೋಹನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದರೋಡೆಯ ಘಟನೆ ಬಗ್ಗೆ ದೂರು ಬಂದಿತ್ತು. ರಾಮಾ ಪಾರ್ಕ್‌ನಲ್ಲಿ ಬೆಳಗ್ಗೆ ತನ್ನ ವಾಷಿಂಗ್ ಮೆಷಿನ್ ರಿಪೇರಿ ಮಾಡಿಸಲು ಹೋಗುತ್ತಿದ್ದಾಗ, ಟಿನ್ ವಾಲಾ ಶಾಲೆಯ ಬಳಿ ಬೈಕ್​​​​ನಲ್ಲಿ ಬಂದ ಇಬ್ಬರು ಬಾಲಕರು ಆತನನ್ನು ತಡೆದು ನಿಲ್ಲಿಸಿ ಮೊಬೈಲ್ ದೋಚಿದ್ದಾರೆ ಎಂದು ದರೋಡೆಗೆ ಒಳಗಾದ ವ್ಯಕ್ತಿ ದೂರು ನೀಡಿದ್ದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 392 (ದರೋಡೆ), 397 (ದರೋಡೆ ಅಥವಾ ಡಕಾಯಿತಿ, ಸಾವು ಅಥವಾ ಘೋರವಾದ ಗಾಯವನ್ನು ಉಂಟುಮಾಡುವ ಪ್ರಯತ್ನ) ಮತ್ತು 34 (ಕ್ರಿಮಿನಲ್ ಬೆದರಿಕೆ) ಅಡಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು ಎಂದು ಉಪ ಪೊಲೀಸ್ ಆಯುಕ್ತ (ದ್ವಾರಕಾ) ಎಂ ಹರ್ಷ ವರ್ಧನ್ ತಿಳಿಸಿದರು.

ಸಿಸಿಟಿವಿ ನೀಡಿತು ಸುಳಿವು: ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿದೆ. ಸಿಸಿಟಿವಿ ದೃಶ್ಯಾವಳಿಗಳ ವಿಶ್ಲೇಷಣೆಯಂತೆ, ಆ ಪ್ರದೇಶದಲ್ಲಿನ ಅಂತಹ ಸಕ್ರಿಯ ಅಪರಾಧಿಗಳ ಬಗ್ಗೆ ಗುಪ್ತಚರ ಮಾಹಿತಿ ಪಡೆಯಲು ರಹಸ್ಯ ಮಾಹಿತಿದಾರರನ್ನು ಸಹ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು ಎಂದು ಅಧಿಕಾರಿ ಹೇಳಿದರು.

ತಾಂತ್ರಿಕ ಮತ್ತು ಮ್ಯಾನುವಲ್ ಕಣ್ಗಾವಲು ಆಧಾರದ ಮೇಲೆ, ಮೋಹನ್ ಗಾರ್ಡನ್ ಪ್ರದೇಶದ ಗಂಡಾ ನಾಲಾ ರಸ್ತೆಯಲ್ಲಿ ತಪಾಸಣೆ ಕೈಗೊಳ್ಳಲಾಯಿತು. ಸ್ವಲ್ಪ ಸಮಯದ ನಂತರ, ಇಬ್ಬರು ವ್ಯಕ್ತಿಗಳು ದ್ವಾರಕಾ ಮೋರ್ ಕಡೆಗೆ ಹೋಗುತ್ತಿರುವುದು ಕಂಡುಬಂದಿತ್ತು. ಆದರೆ ಪೊಲೀಸರನ್ನು ನೋಡಿದ ತಕ್ಷಣ ಅವರು ಪರಾರಿಯಾಗಲು ಪ್ರಯತ್ನಿಸಿದ್ದರು. ಕೊನೆಗೂ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಪ್ಪೊಪ್ಪಿಕೊಂಡಿರುವ ಆರೋಪಿಗಳು: ವಿಚಾರಣೆಯಲ್ಲಿ ಮೊಬೈಲ್ ಫೋನ್ ದರೋಡೆಯಲ್ಲಿ ಭಾಗಿಯಾಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಮತ್ತಷ್ಟು ವಿಚಾರಣೆಯ ನಂತರ ಉತ್ತಮ ನಗರದ ವಿಕಾಸ್ ನಗರದಿಂದ ಮತ್ತೊಂದು ಕದ್ದ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಯಿತು. ಆರೋಪಿ ಬಾಬಿ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಲು ಇಬ್ಬರೂ ಯೋಜಿಸಿದ್ದರು ಎಂದು ಅಧಿಕಾರಿ ಎಂ ಹರ್ಷ ವರ್ಧನ್ ತಿಳಿಸಿದರು.

ಇದನ್ನು ಓದಿ: ಪೊಲೀಸ್ ಸಿಬ್ಬಂದಿಗೆ ಪೆಪ್ಪರ್ ಸ್ಪ್ರೇ ಎರಚಿ ಹಲ್ಲೆ ಮಾಡಿದ್ದ ರೌಡಿಶೀಟರ್ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.