ETV Bharat / crime

ಅಶ್ಲೀಲ ಫೋಟೋ ಇಟ್ಟುಕೊಂಡು ಬೆದರಿಕೆ ಹಾಕಿದ್ದ ಆರೋಪಿ ಬಂಧನ - kollegala latest news

ಗೆಳತಿಗೆ ಕರೆ ಮಾಡಿ ನಿನ್ನ ಅಶ್ಲೀಲ ಫೋಟೋ ಕಳುಹಿಸು ಇಲ್ಲವಾದರೇ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಬೆದರಿಸಿದ್ದ. ಈ ಮಾತಿಗೆ ಮಣಿದು ಪ್ರಯತಮೆ ತನ್ನ ಖಾಸಗಿ ಫೋಟೋಗಳನ್ನು ಕಳುಹಿಸಿದ್ದಾಳೆ. ಕೆಲ ದಿನ ಬಳಿಕ ಅಶ್ಲೀಲ ಫೋಟೋಗಳನ್ನು ಪ್ರಿಯತಮೆಯ ಮನೆಯವರ ಫೋನ್ ಗಳಿಗೆ ರವಾನಿಸಿ ವಿಕೃತಿ ಮೆರೆದಿದಿದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾನಂತೆ.

Arrest of accused who threaten to his girlfriend
ಅಶ್ಲೀಲ ಫೋಟೋ ಮುಂದಿಟ್ಟು ಬೆದರಿಕೆ ಹಾಕಿದ್ದ ಆರೋಪಿ ಬಂಧನ
author img

By

Published : Mar 11, 2021, 1:42 AM IST

Updated : Mar 11, 2021, 6:54 PM IST

ಕೊಳ್ಳೇಗಾಲ: ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯ ಅಶ್ಲೀಲ ಫೋಟೋಗಳನ್ನು ಪಡೆದು ಆಕೆಯ ಕುಟುಂಬಸ್ಥರಿಗೆ ರವಾನಿಸಿದಲ್ಲದೆ, ಕೊಲೆ ಬೆದರಿಕೆ ಹಾಕಿದ್ದ ಯುವಕನೋರ್ವನನ್ನು ಪೋಲಿಸರು ಬಂಧಿಸಿರುವ ಘಟನೆ ನಡೆದಿದೆ.

ಪಟ್ಟಣದ ನಿವಾಸಿ ದೌರ್ಜನ್ಯಕ್ಕೆ ಒಳಗಾದ ಯುವತಿಯಾಗಿದ್ದಾಳೆ. ಮದ್ದೂರಿನ ಟಿ.ಕೆ ಹಳ್ಳಿಯ ಪ್ರಶಾಂತ್ ಬಂಧಿತ ಆರೋಪಿ. ಈತ ಕಳೆದ ಮೂರು ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ ಮದುವೆಯಾಗುವುದಾಗಿ ನಂಬಿಸಿದ್ದ. ಆದರೆ, ಇಬ್ಬರ ಪ್ರೇಮ ವಿಚಾರ ಮನೆಯವರಿಗೆ ತಿಳಿದು ಮದುವೆ ವಿಚಾರವನ್ನು ನಿರಾಕರಿಸಿದ್ದರು.

ಮನೆಯವರ ಮಾತಿನಂತೆ ಕೆಲ ದಿನಗಳ ಕಾಲ ಸುಮ್ಮನಿದ್ದ ಈತ ಇಷ್ಟಕ್ಕೆ ಸುಮ್ಮನಿರದೆ ಆಕೆಗೆ ಕರೆ ಮಾಡಿ ನಿನ್ನ ಅಶ್ಲೀಲ ಫೋಟೋ ಕಳುಹಿಸು ಇಲ್ಲವಾದರೇ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಬೆದರಿಸಿದ್ದ. ಈ ಮಾತಿಗೆ ಮಣಿದು ಪ್ರಯತಮೆ ತನ್ನ ಖಾಸಗಿ ಫೋಟೋಗಳನ್ನು ಕಳುಹಿಸಿದ್ದಾಳೆ. ಕೆಲ ದಿನ ಬಳಿಕ ಅಶ್ಲೀಲ ಫೋಟೋಗಳನ್ನು ಪ್ರಿಯತಮೆಯ ಮನೆಯವರ ಫೋನ್ ಗಳಿಗೆ ರವಾನಿಸಿ ವಿಕೃತಿ ಮೆರೆದಿದಿದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾನಂತೆ.

ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಪ್ರಶಾಂತ್​ನನ್ನು ಬಂಧಿಸಿದ್ದಾರೆ.

Last Updated : Mar 11, 2021, 6:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.