ETV Bharat / crime

ಮಹಿಳಾ ಸೇನಾಧಿಕಾರಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ: ಹಣ ದೋಚಿ ದುಷ್ಕರ್ಮಿಗಳು ಪರಾರಿ - ಈಟಿವಿ ಭಾರತ ಕನ್ನಡ

ಯುವತಿಯ ತಾಯಿ ದೂರು ದಾಖಲಿಸಲು ಟೆಲಿಬಾಗ್ ಪೊಲೀಸ್ ಔಟ್‌ಪೋಸ್ಟ್‌ಗೆ ತಲುಪಿದಾಗ, ಅಪರಿಚಿತ ವ್ಯಕ್ತಿಯಿಂದ ಅವರಿಗೆ ಕರೆ ಬಂದಿತ್ತು. ಆವರ ಮಗಳು ಗೋಮತಿ ನಗರದಲ್ಲಿರುವ ಫನ್ ರಿಪಬ್ಲಿಕ್ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ಹಾಜರಿದ್ದಾಳೆ ಎಂದು ಕರೆ ಮಾಡಿದ್ದ ವ್ಯಕ್ತಿ ಹೇಳಿದ್ದ.

ಮಹಿಳಾ ಸೇನಾಧಿಕಾರಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ: ಹಣ ದೋಚಿ ದುಷ್ಕರ್ಮಿಗಳು ಪರಾರಿ
army-officers-daughter-molested-looted-in-lucknow
author img

By

Published : Nov 17, 2022, 12:36 PM IST

ಲಖನೌ: ಸೇನಾ ವೈದ್ಯಕೀಯ ದಳದ ಹಿರಿಯ ಮಹಿಳಾ ಅಧಿಕಾರಿಯೊಬ್ಬರ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಯ ಮಗಳು ಮನೆಗೆ ಹಿಂತಿರುಗುತ್ತಿದ್ದಾಗ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಆಕೆಯ ಕ್ರೆಡಿಟ್ ಕಾರ್ಡ್ ಮತ್ತು 500 ರೂಪಾಯಿ ದೋಚಿದ್ದಾರೆ. ಘಟನೆ ನವೆಂಬರ್ 8 ರಂದು ನಡೆದಿದ್ದು, ಬುಧವಾರ ಎಫ್‌ಐಆರ್ ದಾಖಲಾಗಿದೆ.

ಎಫ್‌ಐಆರ್‌ ಪ್ರಕಾರ, 22 ವರ್ಷದ ಸಂತ್ರಸ್ತೆ ಲಕ್ನೋದ ಎಸ್‌ಜಿಪಿಜಿಐ ಪ್ರದೇಶದ ಚಿಲ್ಲರೆ ಅಂಗಡಿಯಿಂದ ಸಾಮಾನು ಖರೀದಿಸಲು ತನ್ನ ಮನೆಯಿಂದ ಹೊರಗೆ ಹೋಗಿದ್ದಳು. ಆದರೆ ಎಷ್ಟೋ ಗಂಟೆಗಳಾದರೂ ಆಕೆ ಮನೆಗೆ ಬಂದಿರಲಿಲ್ಲ. ಫೋನ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಪೋಷಕರು ಆಕೆಯ ಭದ್ರತೆಯ ಬಗ್ಗೆ ಆತಂಕಗೊಂಡಿದ್ದರು.

ಕೊನೆಗೆ ಆಕೆಯ ತಾಯಿ ಸ್ವತಃ ಶಾಪಿಂಗ್ ಮಾಲ್​ಗೆ ಹೋಗಿದ್ದರು. ಯುವತಿ ಅಲ್ಲಿಗೆ ಬಂದಿದ್ದನ್ನು ಮಾಲ್​ ಸಿಬ್ಬಂದಿ ಖಚಿತಪಡಿಸಿದ್ದರು.

ಕೊನೆಗೆ ಯುವತಿಯ ತಾಯಿ ದೂರು ದಾಖಲಿಸಲು ಟೆಲಿಬಾಗ್ ಪೊಲೀಸ್ ಔಟ್‌ಪೋಸ್ಟ್‌ಗೆ ತಲುಪಿದಾಗ, ಅಪರಿಚಿತ ವ್ಯಕ್ತಿಯಿಂದ ಅವರಿಗೆ ಕರೆ ಬಂದಿತ್ತು. ಆವರ ಮಗಳು ಗೋಮತಿ ನಗರದಲ್ಲಿರುವ ಫನ್ ರಿಪಬ್ಲಿಕ್ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ಹಾಜರಿದ್ದಾಳೆ ಎಂದು ಕರೆ ಮಾಡಿದ್ದ ವ್ಯಕ್ತಿ ಹೇಳಿದ್ದ.

ನಾನು ತಕ್ಷಣ ಫನ್ ರಿಪಬ್ಲಿಕ್ ಪೊಲೀಸ್ ಔಟ್‌ಪೋಸ್ಟ್ ಅನ್ನು ತಲುಪಿದೆ. ಅಲ್ಲಿ ನನ್ನ ಮಗಳು ದಿಗ್ಭ್ರಮೆ ಮತ್ತು ಚಂಚಲ ಸ್ಥಿತಿಯಲ್ಲಿದ್ದಳು. ಅವಳು ಉದ್ವೇಗಗೊಂಡಿದ್ದಳು. ಆಕೆಯ ಕಾಲಲ್ಲಿನ ಚಪ್ಪಲಿ ಕಾಣೆಯಾಗಿದ್ದವು. ಕೂದಲು ಕೆದರಿತ್ತು. ಅವಳು ನನ್ನನ್ನು ನೋಡಿದ ತಕ್ಷಣ ಅಳಲು ಪ್ರಾರಂಭಿಸಿದಳು ಎಂದು ಸಂತ್ರಸ್ತೆಯ ತಾಯಿ ಹೇಳಿದರು.

ಸಂತ್ರಸ್ತೆ ಹೇಳಿದ್ದು: ಯುವಕನೊಬ್ಬ ನನ್ನನ್ನು ಬೆಳಗ್ಗೆಯಿಂದ ಹಿಂಬಾಲಿಸುತ್ತಿದ್ದ. ನಾನು ಟೆಲಿಬಾಗ್ ಕಡೆಗೆ ಹೋಗುತ್ತಿರುವಾಗ ಆಕಾಶ್ ಎನ್​ಕ್ಲೇವ್ ಬಳಿ ಆತ ಬೈಕ್ ಒಂದರ ಮೇಲೆ ಕುಳಿತಿದ್ದ. ಮೊದಲು ಹೋದ ಮಾಲ್​ನಲ್ಲಿ ಬೇಕಾದ ವಸ್ತು ಸಿಗದ ಕಾರಣ ನಾನು ಆಟೊ ಹಿಡಿದು ಟೆಲಿಬಾಗ್​ಗೆ ಹೊರಟಿದ್ದೆ. ಟೆಲಿಬಾಗ್​ನಲ್ಲಿ ಆಟೊ ಇಳಿದು ಹೋಗುತ್ತಿರುವಾಗ ಬಿಳಿ ಕಾರೊಂದು ನನ್ನ ಪಕ್ಕಕ್ಕೆ ಬಂದಿತು.

ಆ ಕಾರಲ್ಲಿ ಅದೇ ಯುವಕನಿದ್ದ. ಆತ ನನ್ನ ಕೂದಲು ಹಿಡಿದೆಳೆದು ಕಾರಿನಲ್ಲಿ ಕೂರಿಸಿಕೊಂಡ. ಮತ್ತೊಬ್ಬ ಡ್ರೈವ್ ಮಾಡುತ್ತಿದ್ದ. ಯುವಕ ನನ್ನ ಮೇಲೆ ದೌರ್ಜನ್ಯವೆಸಗಿದ. ನನ್ನ ಬಟ್ಟೆ ಹರಿದುಹಾಕಿದ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕಾರು ಚಲಾಯಿಸುತ್ತ ಕೊನೆಗೆ ನಿರ್ಜನವಾದ ಪ್ರದೇಶವೊಂದರಲ್ಲಿ ಕಾರು ನಿಲ್ಲಿಸಿದರು. ಅಲ್ಲಿ ದೊಡ್ಡ ಕಸದ ಬೆಟ್ಟ ಇತ್ತು. ಅಲ್ಲಿ ನನ್ನ ಕ್ರೆಡಿಟ್ ಕಾರ್ಡ್ ಮತ್ತು ಹಣ ಕಸಿದುಕೊಂಡು ಅವರಿಬ್ಬರೂ ಪರಾರಿಯಾದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ನಂತರ ಆಕೆ ಹಾದಿಯಲ್ಲಿ ಹೋಗುವವರೊಬ್ಬರಿಂದ ಸಹಾಯ ಪಡೆದು ಫನ್ ರಿಪಬ್ಲಿಕ್ ಪೊಲೀಸ್ ಔಟ್​ಪೋಸ್ಟ್ ತಲುಪಿದಳು. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಯುವತಿಯ ತಾಯಿ ಆಗ್ರಹಿಸಿದ್ದಾರೆ.

ದರೋಡೆ, ಲೈಂಗಿಕ ಕಿರುಕುಳ, ಸುಲಿಗೆಗಾಗಿ ಅಪಹರಣ ಮುಂತಾದ ಆರೋಪಗಳಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಗೋಮತಿ ನಗರ ಡಿ.ಸಿ ಮಿಶ್ರಾ ಹೇಳಿದ್ದಾರೆ. ವಾಹನದ ನಂಬರ್ ಪತ್ತೆ ಹಚ್ಚಲು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಿಂದೂ ಯುವತಿ ಅಪಹರಣ: ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಮುಸ್ಲಿಂ ವ್ಯಕ್ತಿ ಜೊತೆ ವಿವಾಹ! ಇದು ನಡೆದಿದ್ದೆಲ್ಲಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.