ETV Bharat / crime

ಬರ್ತ್‌ಡೇ ಪಾರ್ಟಿಯಲ್ಲಿ ಏಮ್ಸ್‌ ವೈದ್ಯೆ ಮೇಲೆ ಹಿರಿಯ ಸಹೋದ್ಯೋಗಿಯಿಂದಲೇ ಅತ್ಯಾಚಾರ ಆರೋಪ! - ಏಮ್ಸ್‌ನ ಹಿರಿಯ ಸಹೋದ್ಯೋಗಿಯಿಂದಲೇ ವೈದ್ಯೆ ಮೇಲೆ ಅತ್ಯಾಚಾರ ಆರೋಪ

ಹಿರಿಯ ಸಹೋದ್ಯೋಗಿ ಬರ್ತ್‌ಡೇ ಪಾರ್ಟಿಗೆ ಹೋಗಿದ್ದಾಗ ಯುವ ವೈದ್ಯೆ ಮೇಲೆ ಅತ್ಯಾಚಾರ ಮಾಡಿರುವ ಆರೋಪದ ಪ್ರಕರಣ ದೆಹಲಿಯ ಏಮ್ಸ್‌ ಕಾಂಪ್ಲೆಕ್ಸ್‌ನಲ್ಲಿ ನಡೆದಿದೆ. ಈ ಬಗ್ಗೆ ತನ್ನ ಹಿರಿಯ ಸಹೋದ್ಯೋಗಿ ವಿರುದ್ಧ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.

AIIMS Doctor Alleges Rape by Senior Colleague During Birthday Party, Case Filed
ಬರ್ತ್‌ಡೇ ಪಾರ್ಟಿಯಲ್ಲಿ ಏಮ್ಸ್‌ ವೈದ್ಯೆ ಮೇಲೆ ಹಿರಿಯ ಸಹೋದ್ಯೋಗಿಯಿಂದಲೇ ಅತ್ಯಾಚಾರ ಆರೋಪ!
author img

By

Published : Oct 16, 2021, 5:58 PM IST

ನವದೆಹಲಿ: ಹುಟ್ಟುಹಬ್ಬದ ಪಾರ್ಟಿಯಲ್ಲಿ ಆಲ್‌ ಇಂಡಿಯಾ ಇನ್ಸಿಟ್ಯೂಟ್​ ಆಫ್‌ ಮೆಡಿಕಲ್‌ ಸೈನ್ಸ್‌(ಏಮ್ಸ್‌) ನ ಯುವ ವೈದ್ಯೆಯ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಕೇಳಿ ಬಂದಿದೆ. ತನ್ನ ಹಿರಿಯ ಸಹೋದ್ಯೋಗಿ ಕ್ಯಾಂಪಸ್‌ ಆವರಣದಲ್ಲಿ ಅತ್ಯಾಚಾರ ಮಾಡಿರುವುದಾಗಿ ಸಂತ್ರಸ್ತೆ ವೈದ್ಯ ಆರೋಪಿಸಿದ್ದಾಳೆ.

ಸೆಪ್ಟೆಂಬರ್‌ 26 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಅಕ್ಟೋಬರ್‌ 11 ರಂದು ಮಾಹಿತಿ ಪಡೆದಿದ್ದು, ಎಂಎಲ್‌ಸಿ (ಮೆಡಿಕೋ ಲೀಗಲ್‌ ಕೇಸ್‌) ದಾಖಲಿಸಿರುವುದಾಗಿ ಹೇಳಿದ್ದಾರೆ.

ಸೆಪ್ಟೆಂಬರ್‌ 26 ರಂದು ಹುಟ್ಟುಹಬ್ಬ ಆಚರಿಸುವ ಸಲುವಾಗಿ ಹಿರಿಯ ಸಹೋದ್ಯೋಗಿ ರೂಂಗೆ ಹೋಗಿದ್ದಾಗ ಆತ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ತನ್ನ ತಂಡಕ್ಕೆ ಹೇಳಿದ್ದಾಳೆ. ಆರೋಪಿ ವಿವಾಹಿತನಾಗಿದ್ದು, ಏಮ್ಸ್‌ ಕಾಂಪ್ಲೆಕ್ಸ್‌ನಲ್ಲೇ ಕುಟುಂಬದೊಂದಿಗೆ ನೆಲೆಸಿದ್ದಾನೆ. ಘಟನೆ ನಡೆದ ರಾತ್ರಿ ಆರೋಪಿಯ ಕುಟುಂಬ ನಗರದಿಂದ ಹೊರಗಡೆ ಹೋಗಿದ್ದರು. ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಇತರ ವೈದ್ಯರನ್ನು ವಿಚಾರಣೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ತನ್ನ ಇತರ ಸಹೋದ್ಯೋಗಿಗಳೊಂದಿಗೆ ಬರ್ತ್‌ಡೇ ಪಾರ್ಟಿಗೆ ಹೋಗಿದ್ದ ಸಂತ್ರಸ್ತೆ ಅಂದು ಮದ್ಯಸೇವಿಸಿ ಆರೋಪಿ ಮನೆಯಲ್ಲೇ ಮಲಗಿದ್ದಾಳೆ. ಆಗ ಒತ್ತಾಯ ಪೂರಕವಾಗಿ ಆತ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.