ETV Bharat / crime

ಕೋವಿಡ್ ಆಸ್ಪತ್ರೆಗೆ ದಾಖಲಿಸುವ ವಿಚಾರ: ಚಾಮರಾಜನಗರದಲ್ಲಿ ಡೀನ್, ವೈದ್ಯನಿಗೆ ನಿಂದನೆ - Abuse of Dean, doctor in Chamarajanagar

ಶ್ರೀನಿವಾಸ್ ಮತ್ತು ನಾಗೇಶ್ ಎಂಬವರು ಚಾಮರಾಜನಗರ ಮೆಡಿಕಲ್ ಕಾಲೇಜಿನ ಡೀನ್ ಸಂಜೀವ್ ಹಾಗೂ ಜಿಲ್ಲಾ ನೋಡಲ್ ವೈದ್ಯಾಧಿಕಾರಿ ಡಾ.ಮಹೇಶ್​ಗೆ ಅವಾಚ್ಯವಾಗಿ ನಿಂದಿಸಿ, ಮೊಬೈಲ್ ಕಿತ್ತೆಸಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಚಾಮರಾಜನಗರದಲ್ಲಿ ಡೀನ್, ವೈದ್ಯನಿಗೆ ನಿಂದನೆ
ಚಾಮರಾಜನಗರದಲ್ಲಿ ಡೀನ್, ವೈದ್ಯನಿಗೆ ನಿಂದನೆ
author img

By

Published : May 27, 2021, 10:32 PM IST

ಚಾಮರಾಜನಗರ: ಕೋವಿಡ್ ಕೇರ್ ಸೆಂಟರ್​ನಿಂದ ಕೋವಿಡ್ ಆಸ್ಪತ್ರೆಗೆ ದಾಖಲಿಸುವ ವಿಚಾರದಲ್ಲಿ ಶ್ರೀನಿವಾಸ್ ಮತ್ತು ನಾಗೇಶ್ ಎಂಬವರು ವೈದ್ಯರಿಗೆ ಅವಾಚ್ಯವಾಗಿ ನಿಂದಿಸಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಈ ಕುರಿತು ಡಾ.ಮಹೇಶ್ ಮಾತನಾಡಿ, ಗಲಾಟೆ ಆಗಿರುವುದು ನಿಜ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ನಿಜ. ಈ ಸಂಕಷ್ಟದ ನಡುವೆ ಕೆಲವರ ವರ್ತನೆಯಿಂದ ಕರ್ತವ್ಯ ನಿರ್ವಹಿಸಲು ಭಯವಾಗುತ್ತಿದೆ ಎಂದರು. ಘಟನೆ ಸಂಬಂಧ ಡೀನ್ ಮತ್ತು ನೋಡಲ್ ಅಧಿಕಾರಿ ಪಟ್ಟಣ ಠಾಣೆಗೆ ದೂರು ಕೊಡಲು ಮುಂದಾಗಿದ್ದಾರೆ.

ಇಂದಿನ ಕೋವಿಡ್ ರಿಪೋರ್ಟ್: ಇಂದು ಜಿಲ್ಲೆಯಲ್ಲಿ ಬರೋಬ್ಬರಿ 392 ಮಂದಿಗೆ ಸೋಂಕು ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ‌ ಸಂಖ್ಯೆ 3,132ಕ್ಕೆ ಏರಿಕೆಯಾಗಿದ್ದು, 395 ಮಂದಿ ಗುಣಮುಖರಾಗಿದ್ದಾರೆ. 57 ಮಂದಿ ಐಸಿಯುನಲ್ಲಿದ್ದು, 1138 ಮಂದಿ ಹೋಂ ಐಸೋಲೇಷನ್ನ​ಲ್ಲಿದ್ದಾರೆ. 4,836 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಸೋಂಕಿಗೆ ಇಂದು 8 ಮಂದಿ ಬಲಿಯಾಗಿದ್ದು, ಜಿಲ್ಲೆಯಲ್ಲಿ 1,268 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ.

ಓದಿ:ಬ್ಲ್ಯಾಕ್ ಫಂಗಸ್​ಗೆ ದ.ಕ.ಜಿಲ್ಲೆಯಲ್ಲಿ‌ ಮತ್ತೆ ಮೂವರು ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.