ETV Bharat / crime

ಯುವತಿ ಫೋನ್‌ ನಂಬರ್‌ ಕೊಡದಿದ್ದಕ್ಕೆ ಗುಂಡು ಹಾರಿಸಿ ಶೂಟ್‌ ಮಾಡುವ ಬೆದರಿಕೆ! - ಗುಂಡಿನ ದಾಳಿ

ಫೋನ್‌ ನಂಬರ್‌ ಕೊಡದಿದ್ದಕ್ಕೆ ಪಕ್ಕದ ಮನೆಯ ಯುವತಿಯನ್ನು ಶೂಟ್‌ ಮಾಡುವ ಬೆದರಿಕೆ ಹಾಕಿರುವ ಘಟನೆ ಚಿತ್ತೂರು ಜಿಲ್ಲೆಯ ಕಡಪನತ್ತಂ ಗ್ರಾಮದಲ್ಲಿ ನಡೆದಿದೆ.

a man threatening with a gun that the phone number was not given in chittoor district
ಯುವತಿ ಫೋನ್‌ ನಂಬರ್‌ ಕೊಡದಿದ್ದಕ್ಕೆ ಗುಂಡು ಹಾರಿಸಿ ಶೂಟ್‌ ಮಾಡುವ ಬೆದರಿಕೆ..!
author img

By

Published : Jun 19, 2021, 8:17 AM IST

ಚಿತ್ತೂರು (ಆಂಧ್ರ ಪ್ರದೇಶ): ಪಕ್ಕದ ಮನೆಯ ಯುವತಿ ಮೊಬೈಲ್‌ ನಂಬರ್‌ ಕೊಡದಿದ್ದಕ್ಕೆ ಗನ್‌ನಿಂದ ಗುಂಡು ಹಾರಿಸಿ ಬೆದರಿಕೆ ಹಾಕಿರುವ ಘಟನೆ ಬೈರೆಡ್ಡಿಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡಪನತ್ತಂ ಗ್ರಾಮದಲ್ಲಿ ನಡೆದಿದೆ.

ಚಾನು ಎಂಬುವವನೇ ಗುಂಡು ಹಾರಿಸಿ ಬೆದರಿಕೆ ಹಾಕಿರುವ ಯುವಕ. ಪಕ್ಕದ ಮನೆಯ ಯುವತಿಯ ಫೋನ್ ನಂಬರ್‌ ಕೇಳಿದ್ದಾನೆ. ಆಕೆ ನಂಬರ್‌ ನೀಡಲು ನಿರಾಕರಿಸಿದ್ದಾಳೆ. ಜೊತೆಗೆ ತಕ್ಷಣವೇ ವಿಷಯವನ್ನು ತನ್ನ ತಾಯಿಗೆ ಮುಟ್ಟಿಸಿದ್ದಾಳೆ. ಯುವತಿ ತಾಯಿ ಚಾನು ಮನೆಗೆ ಹೋಗಿ ಪೋಷಕರಿಗೆ ನಿಮ್ಮ ಮಗನ ವರ್ತನೆ ಸರಿಯಿಲ್ಲ ಎಂದು ಎಚ್ಚರಿಕೆ ನೀಡಿ ಬಂದಿದ್ದಾಳೆ. ಆರೋಪಿಯ ಕೃತ್ಯದ ಬಗ್ಗೆ ಗ್ರಾಮದ ಹಿರಿಯರ ಗಮನಕ್ಕೂ ತಂದಿದ್ದಾಳೆ.

ಇದನ್ನೂ ಓದಿ: ಕಂದಕಕ್ಕೆ ಉರುಳಿದ ಬಸ್: 27 ಮಂದಿ ದುರ್ಮರಣ

ಇದರಿಂದ ರೊಚ್ಚಿಗೆದ್ದ ಚಾನು, ನಿನ್ನೆ ರಾತ್ರಿ ನಾಡ ಪಿಸ್ತೂಲ್‌ನೊಂದಿಗೆ ಬೀದಿಗೆ ಬಂದು ಜೋರಾಗಿ ಕಿರುಚಾಡಿ ರಂಪಾಟ ಮಾಡಿದ್ದಾನೆ. ಅಕ್ಕಪಕ್ಕದ ಮನೆಯವರು ಈತನ ಪುಂಡಾಟವನ್ನು ಪ್ರಶ್ನೆ ಮಾಡಿದಕ್ಕೆ ಕೈಯಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಈತ ಹಾರಿಸಿದ ಗುಂಡು ಮನೆಯೊಂದರ ಬಾಗಿಲಿಗೆ ತಗುಲಿದ ಪರಿಣಾಮ ಬಾಗಿಲು ಒಡೆದು ಹೋಗಿದೆ. ಭಯಭೀತರಾದ ಯುವತಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.