ETV Bharat / crime

ಚಿತ್ರದುರ್ಗದಲ್ಲಿ ಕೌಟುಂಬಿಕ ಕಲಹ: ಚಾಕುವಿನಿಂದ ಇರಿದು ಪತ್ನಿ ಕೊಲೆ - ಚಿತ್ರದುರ್ಗ ಜಿಲ್ಲೆ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಸ್ಕೂಟಿಯಲ್ಲಿ ಕರೆದೊಯ್ದು ಕೊಲೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. 30 ವರ್ಷದ ಅಮೀನಾ ಬಾನು ಹತ್ಯೆಯಾದ ಮಹಿಳೆ. ಕೊಲೆ ಆರೋಪಿ ಮೆಹಬೂಬ್ ಪಾಷಾನನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

A man murdered his wife in chitradurga city
ಚಿತ್ರದುರ್ಗದಲ್ಲಿ ಕೌಟುಂಬಿಕ ಕಲಹ; ಚಾಕುವಿನಿಂದ ಇರಿದು ಪತಿಯಿಂದ ಪತ್ನಿ ಕೊಲೆ
author img

By

Published : Sep 11, 2021, 5:17 PM IST

Updated : Sep 11, 2021, 10:27 PM IST

ಚಿತ್ರದುರ್ಗ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯಿಂದಲೇ ಪತ್ನಿಯ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ನಗರದ ವೆಂಕಟೇಶ್ವರ ಬಡಾವಣೆ ಬಳಿ ನಡೆದಿದೆ. ನಗರದ ಬಡಾಮಖಾನ್ ಬಡಾವಣೆಯ ಅಮೀನಾ ಬಾನು (30) ಹತ್ಯೆಯಾದ ದುರ್ದೈವಿ.

ಚಿತ್ರದುರ್ಗದಲ್ಲಿ ಕೌಟುಂಬಿಕ ಕಲಹ: ಚಾಕುವಿನಿಂದ ಇರಿದು ಪತ್ನಿ ಕೊಲೆ

ಚಳ್ಳಕೆರೆ ಬಳಿಯ ದರ್ಗಾಕ್ಕೆ ಸ್ಕೂಟಿಯಲ್ಲಿ ಕರೆದೊಯ್ದಿದ್ದು ವಾಪಸ್ ಬರುವಾಗ ಸ್ಕೂಟಿ ಚಾಲನೆ ವೇಳೆಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಆರೋಪಿ ಮೆಹಬೂಬ್ ಪಾಷಾ ತಮ್ಮ ಸಂಬಂಧಿ ಅಮೀನಾರನ್ನು ಮದುವೆಯಾಗಿದ್ದು, ಪತಿ - ಪತ್ನಿ ಮಧ್ಯೆ ಗಲಾಟೆಯಾಗಿ ರಾಜಿ ಪಂಚಾಯಿಗಳು ಆಗಿದ್ದವು. ಇಷ್ಟೆಲ್ಲ ಅದರೂ ಸಹ ಇಬ್ಬರ ನಡುವೆ ಪದೇ ಪದೆ ಮನಸ್ತಾಪಗಳು ಆಗುತ್ತಲೇ ಇದ್ದವು ಎಂದು ತಿಳಿದು ಬಂದಿದೆ. ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮೆಹಬೂಬ್ ಪಾಷಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Last Updated : Sep 11, 2021, 10:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.