ಕೊಳ್ಳೇಗಾಲ(ಚಾಮರಾಜನಗರ) : ಸಹೋದರರಿಬ್ಬರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬೈಕ್ ನಿಲ್ಲಿಸಿ ಅಣ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬಾಳನಹುಂಡಿ ಗ್ರಾಮದ ಬಸವರಾಧ್ಯ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಈತ 20 ದಿನಗಳ ಹಿಂದಷ್ಟೆ ಕನಕಪುರ ರಸ್ತೆ ಮಾರ್ಗದಲ್ಲಿ ಅಪಘಾತಕ್ಕಿಡಾಗಿದ್ದ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆ ಸೇರಿದ್ದ ಈತನಿಗೆ ಆರೈಕೆ ಮಾಡಲಾಗುತ್ತಿತ್ತು. ಇಂದು ತಮ್ಮ ಪ್ರಮೋದ್ ಜೊತೆ ಕೊಳ್ಳೇಗಾಲದ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆಂದು ಬರುವ ವೇಳೆ ಬಸವರಾಧ್ಯ ಬೈಕ್ ನಿಲ್ಲಿಸು ನನಗೆ ವಾಂತಿ ಬರುವಂತಿದೆ ಎಂದು ಹೇಳಿದ್ದಾನೆ. ಅಣ್ಣ ಮಾತಿನಂತೆ ಸಹೋದರ ಬೈಕ್ ನಿಲ್ಲಿಸಿದ್ದಾನೆ. ಈ ವೇಳೆ ಏಕಾಏಕಿ ಬಸವರಾಧ್ಯ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಶೋಧ ಕಾರ್ಯ ನಡೆಸಿದ್ದಾರೆ. ನೀರಿನ ಹರಿವು ಹೆಚ್ಚಾದ್ದರಿಂದ ಯುವಕನ ದೇಹ ಪತ್ತೆಯಾಗಿಲ್ಲ. ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೈಕ್ ನಿಲ್ಲಿಸಿ ನದಿಗೆ ಹಾರಿದ; ಕೊಳ್ಳೇಗಾಲದಲ್ಲಿ ತಮ್ಮನ ಕಣ್ಮುಂದೆಯೇ ಅಣ್ಣನ ಆತ್ಮಹತ್ಯೆ..! - ಕೊಳ್ಳೇಗಾಲ
ಆರೋಗ್ಯ ತಪಾಸಣೆಗೆ ಎಂದು ಆಸ್ಪತ್ರೆಗೆ ಹೋಗುತ್ತಿದ್ದಾಗ ಕುರುಬಾಳನಹುಂಡಿ ಗ್ರಾಮದ ಬಸವರಾಧ್ಯ ಎಂಬುವವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲದ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.