ನವದೆಹಲಿ : ವಕೀಲರೊಬ್ಬರ ಜೇಬಿನಲ್ಲಿ ಇದ್ದಾಗಲೇ ಹೊಸದಾಗಿ ಖರೀದಿಸಿದ್ದ ಒನ್ ಪ್ಲಸ್ ನಾರ್ಡ್-2 ಸ್ಮಾರ್ಟ್ ಫೋನ್ ಸ್ಫೋಟಗೊಂಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಬಗ್ಗೆ ವಕೀಲ ಗೌರವ್ ಗುಲಾಟಿ ಸ್ಫೋಟಗೊಂಡಿರುವ ಮೊಬೈಲ್ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
![OnePlus Nord 2 caught fire and exploded](https://etvbharatimages.akamaized.net/etvbharat/prod-images/13051160_third.jpg)
ಸ್ಫೋಟದ ಸಮಯದಲ್ಲಿ ಫೋನ್ ಬಳಸಿರಲಿಲ್ಲ. ಜೊತೆಗೆ ಶೇ.90ರಷ್ಟು ಚಾರ್ಜ್ ಆಗಿತ್ತು. ಫೋನ್‌ನಲ್ಲಿ ಮೊದಲು ಬೆಂಕಿ ಕಾಣಿಸಿದ ಕೆಲವೇ ಸೆಕೆಂಡುಗಳಲ್ಲಿ ಸ್ಫೋಟಗೊಂಡಿದೆ ಎಂದು ವಿವರಿಸಿದ್ದಾರೆ. ಘಟನೆಯಲ್ಲಿ ತಮಗೂ ಗಾಯಗಳಾಗಿವೆ. ಇದೆಲ್ಲ ಕೋರ್ಟ್ ಆವರಣದಲ್ಲೇ ನಡೆಯಿತು ಎಂದು ವಿವರಿಸಿದ್ದಾರೆ.
![OnePlus Nord 2 caught fire and exploded](https://etvbharatimages.akamaized.net/etvbharat/prod-images/13051160_second.jpg)
ಈ ಬಗ್ಗೆ ಒನ್‌ಪ್ಲಸ್ ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಫೋನ್ ತಯಾರಿಸಿದ ಕಂಪನಿಯನ್ನು ನಿಷೇಧಿಸಲು ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಒನ್‌ಪ್ಲಸ್ ಸಂಸ್ಥೆ, ಫೋನ್ ಸ್ಫೋಟದ ಬಗ್ಗೆ ಪರಿಶೀಲನೆ ನಡೆಸದೆ ಪರಿಹಾರ ನೀಡುವುದಿಲ್ಲ. ಸ್ಫೋಟ ಹೇಗಾಯಿತು ಎಂದು ತಿಳಿಯಲು ಗೌರವ್ ಅವರನ್ನು ಸಂಪರ್ಕಿದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದ್ದಾರೆ.
![OnePlus Nord 2 caught fire and exploded](https://etvbharatimages.akamaized.net/etvbharat/prod-images/13051160_first.jpg)
ಎರಡನೇ ಬಾರಿ ಮೊಬೈಲ್‌ನಲ್ಲಿ ಬೆಂಕಿ : ಒನ್ ಪ್ಲಸ್ ಫೋನ್ ಸ್ಫೋಟಗೊಂಡಿರುವುದು ಇದೇ ಮೊದಲಲ್ಲ. ಆಗಸ್ಟ್ ಮೊದಲ ವಾರದಲ್ಲಿ ಇದೇ ರೀತಿ ಫೋನ್‌ನಲ್ಲಿ ಬೆಂಕಿ ಕಾಣಿಸಿತ್ತು. ಒನ್ ಪ್ಲಸ್ ನಾರ್ಡ್ 2 ಫೋನ್ ಮಾರುಕಟ್ಟೆಗೆ ಬಂದು ಎರಡು ವಾರ ಕಳೆದಿವೆ.
ಆದರೆ, ಬೇರೆ ಕಾರಣಗಳಿಂದ ಫೋನ್ ಸ್ಫೋಟಗೊಂಡಿದೆ ಎಂದು ಒನ್‌ಪ್ಲಸ್ ಸ್ಪಷ್ಟನೆ ನೀಡಿದೆ. ಒಂದು ತಿಂಗಳ ಬಳಿಕ ಮತ್ತೊಂದು ಫೋನ್ ಸ್ಫೋಟ ದುರಂತ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.