ETV Bharat / crime

80 ಲಕ್ಷ ನಕಲಿ ನೋಟು ಚಲಾವಣೆಗೆ ಯತ್ನ; ಆರೋಪಿ ವಶಕ್ಕೆ ಪಡೆದ ಮುಂಬೈ ಅಪರಾಧ ದಳ

ಮಹಾನಗರಿಯಲ್ಲಿ ನಕಲಿ ನೋಟು ವಹಿವಾಟು-500 ಮುಖಬೆಲೆಯ 160 ಬಂಡಲ್​ ವಶಕ್ಕೆ- ಭಾರತದ ಆರ್ಥಿಕತೆಗೆ ಹಾನಿ ಮಾಡಲು ಸಂಚು

80 ಲಕ್ಷ ನಕಲಿ ನೋಟು ಚಲಾವಣೆಗೆ ಯತ್ನ; ಆರೋಪಿ ವಶಕ್ಕೆ ಪಡೆದ ಮುಂಬೈ ಅಪರಾಧ ದಳ
80-lakh-fake-note-circulation-attempt-the-accused-was-arrested-by-the-mumbai-crime-branch
author img

By

Published : Dec 29, 2022, 10:53 AM IST

ಮುಂಬೈ: ಖಚಿತ ಮಾಹಿತಿ ಮೇರೆಗೆ ನಕಲಿ ನೋಟು ವಹಿವಾಟು ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಮುಂಬೈ ಅಪರಾಧ ದಳದ ಪೊಲೀಸರು ದಾಳಿ ನಡೆಸಿ, ಆತನನ್ನು ಬಂಧಿಸಿದ್ದಾರೆ. ಬಂಧಿತನಿಂದ 80 ಲಕ್ಷ ಮೌಲ್ಯದ ನಕಲಿ ನೋಟು ವಶಕ್ಕೆ ಪಡೆಯಲಾಗಿದೆ. 500 ರೂ ಮುಖಬೆಲೆಯ 160 ಬಂಡಲ್​ ನಕಲಿ ನೋಟನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಸೌಜನ್ಯಭೂಷಣ್​ ಪಾಟೀಲ್​ (31) ಎಂದು ಗುರುತಿಸಲಾಗಿದೆ.

ಬಂಧಿತನ ವಿರುದ್ಧ ಪ್ರಕರಣ ದಾಖಲು: ಪಾವೈ ಪೊಲೀಸ್​ ಠಾಣಾ ಕಾನ್ಸ್​​ಟೇಬಲ್​ ಸತೀಶ್​​ ಕಾಂಬ್ಳೆ ಈ ನಕಲಿ ನೋಟಿನ ವಹಿವಾಟು ಸಂಬಂಧ ಮಾಹಿತಿಯನ್ನು ಪಡೆದಿದ್ದರು. ಪ್ರತಿ ನಿತ್ಯದ ವ್ಯವಹಾರಕ್ಕೆ ಹೊಂದಿಸಲು ಮತ್ತು ಈ ನೋಟುಅನ್ನು ಚಲಾವಣೆ ಮಾಡಲು ಯತ್ನಿಸಿದ ಆರೋಪಿಯನ್ನು ಟ್ರಾಪ್​ ಮಾಡಿ ಪೊವಾಯ್‌ನಲ್ಲಿರುವ ಅಂಬೇಡ್ಕರ್ ಗಾರ್ಡನ್ ಬಳಿಯ ಸಾಕಿ ವಿಹಾರ್ ರಸ್ತೆಯಲ್ಲಿ ಬಂಧಿಸಿದ್ದಾರೆ.

500 ರೂ ಮುಖಬೆಲೆ ನಕಲಿ ನೋಟು: ಕೆಂಪು ಬ್ಯಾಂಕ್​​ ಹೊಂದಿದ ಎಂಚ್​ 48 ಎಜೆಡ್​​ 1576 ಎಂಬ ಬೈಕ್​​ವೊಂದು ಅನುಮಾನಾಸ್ಪದ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಇದನ್ನು ಪರಿಶೀಲಿಸಿದಾಗ ಅದರಲ್ಲಿ ನಕಲಿ ನೋಟುಗಳು ಪತ್ತೆಯಾದವು. 500 ರೂ ಮುಖಬೆಲೆಯ 160 ಬಂಡಲ್​ ಪತ್ತೆಯಾಗಿವೆ. ಇದರಲ್ಲಿ ಪ್ರತಿ ಬಂಡಲ್​ನಲ್ಲೂ 100 ರೂಪಾಯಿ ನಕಲಿ ನೋಟುಗಳು ಕೂಡ ಇವೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜನವರಿ 4ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಏತನ್ಮಧ್ಯೆ, ಪೊಲೀಸರು ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಈತ ಈ ಹಿಂದೆ ನಕಲಿ ನೋಟುಗಳನ್ನು ಎಲ್ಲಿ ಚಲಾವಣೆ ಮಾಡಿದ್ದನು ಮತ್ತು ಆತನೊಂದಿಗೆ ಬೇರೆ ಯಾರು ಶಾಮೀಲಾಗಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಭಾರತೀಯ ಆರ್ಥಿಕತೆಗೆ ಹಾನಿ ಮಾಡುವ ಉದ್ದೇಶ: ಆರೋಪಿ ತನ್ನ ಆರ್ಥಿಕ ಲಾಭಕ್ಕಾಗಿ ಭಾರತೀಯ ಆರ್ಥಿಕತೆಗೆ ಹಾನಿ ಮಾಡುವ ಉದ್ದೇಶವನ್ನು ಹೊಂದಿದ್ದ ಎಂದು ಪೊಲೀಸ್​​ ಉಪ ಆಯುಕ್ತ ಕೃಷ್ಣಕಾಂತ್​ ಉಪದ್ಯಾಯ್​ ತಿಳಿಸಿದ್ದಾರೆ.

ಇದನ್ನೂ ಓದಿ: ಆನ್​ಲೈನ್ ಜೂಜು ಗೀಳು: ಸಾಲದ ಹೊರೆಗೆ ಹೆದರಿ ಯುವಕ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.