ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹುಲಿ ಗಣತಿಗೆ ಹಾಕಿದ್ದ ಕ್ಯಾಮರಾ ಕಳವು ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಅರಣ್ಯ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನ ಹೊಸಳ್ಳಿ, ಹುಣಸೂರು, ಆನೆ ಚೌಕುರು ಹಾಗೂ ಕಲ್ಲಳ್ಳಿ ಅರಣ್ಯ ವಲಯದಲ್ಲಿ ಹುಲಿ ಗಣತಿಗಾಗಿ ಅಳವಡಿಸಿದ್ದ 8 ಕ್ಯಾಮರಾಗಳನ್ನು ಕಳವು ಮಾಡಿರುವ ಆರೋಪ ಕೇಳಿಬಂದಿದೆ.
ಅರಣ್ಯ ಸಿಬ್ಬಂದಿ ಕ್ಯಾಮರಾದಲ್ಲಿರುವ ಚಿಪ್ಪನ್ನು ಸಂಗ್ರಹಿಸಲು ಹೋದಾಗ ಕ್ಯಾಮರಾ ಕಳವಾಗಿರುವುದು ಗೊತ್ತಾಗಿದೆ. ಹುಲಿ ಗಣತಿಗಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ 450 ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ 8 ಕ್ಯಾಮರಾಗಳು ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ ಎಂದು ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆ ಮತ್ತು ಕೊಡಗಿನ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹುಲಿ ಗಣತಿಗೆ ಅಳವಡಿಸಿದ್ದ 8 ಕ್ಯಾಮರಾಗಳು ಕಳವು; ದೂರು ದಾಖಲು
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನ ಹೊಸಳ್ಳಿ, ಹುಣಸೂರು, ಆನೆ ಚೌಕುರು ಹಾಗೂ ಕಲ್ಲಳ್ಳಿ ಅರಣ್ಯ ವಲಯದಲ್ಲಿ ಹುಲಿ ಗಣತಿಗಾಗಿ ಅಳವಡಿಸಿದ್ದ 8 ಕ್ಯಾಮರಾಗಳನ್ನು ಕಳ್ಳರು ದೋಚಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.