ETV Bharat / crime

75 ವರ್ಷದ ವೃದ್ಧೆ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆ

author img

By

Published : Nov 9, 2022, 12:03 PM IST

ಮೃತರ ಕುಟುಂಬದಲ್ಲಿ ಮೂವರು ವಿವಾಹಿತ ಹೆಣ್ಣು ಮಕ್ಕಳಿದ್ದಾರೆ. ವೃದ್ಧೆ ಮನೆಯನ್ನು ಪರಿಶೀಲಿಸಿದಾಗ ಮನೆಯ ಗೇಟ್ ಆಗಲಿ ಬೀಗವಾಗಲಿ ಮುರಿದಿರುವುದು ಕಂಡುಬಂದಿಲ್ಲ.

72 year old woman found dead under mysterious circumstances
ವೃದ್ಧೆ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆ

ನವದೆಹಲಿ: ಆಗ್ನೇಯ ದೆಹಲಿಯ ಅಮರ್ ಕಾಲೋನಿ ಪ್ರದೇಶದಲ್ಲಿ 75 ವರ್ಷದ ವೃದ್ಧೆಯೊಬ್ಬರು ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಮೃತರನ್ನು ಕುಲ್ವಂತ್ ಕೌರ್ ಎಂದು ಗುರುತಿಸಾಲಾಗಿದೆ. ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆ ಕಟ್ಟಡದ ಮೊದಲ ಮಹಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಮಂಗಳವಾರ ಸಂಜೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತೃರ ಅತ್ತಿಗೆ ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಅವರ ಕೆಲಸದಾಕೆ ಸಮೀನಾ ಪ್ರವೀಣ್ ಮಂಗಳವಾರ ಮನೆಗೆಲಸಕ್ಕಾಗಿ ಬಂದಿದ್ದ ಸಂದರ್ಭದಲ್ಲಿ ಕುಲ್ವಂತ್​ ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ತಿಳಿಸಿದ್ದಾರೆ. ಆ ಕೂಡಲೇ ವೃದ್ಧೆಯನ್ನು ಚಿಕಿತ್ಸೆಗಾಗಿ ಕೈಲಾಶ್ ಪೂರ್ವದ ನ್ಯಾಷನಲ್ ಹಾರ್ಟ್ಸ್ ಇನ್ಸ್ಟಿಟ್ಯೂಟ್​ಗೆ ಸ್ಥಳಾಂತರಿಸಲಾಯಿತು. ಆದರೆ ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದರು. ಹೀಗಾಗಿ ಘಟನೆಯು 5:17ಕ್ಕೆ ಅವರಿಗೆ ವರದಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಹಾಗೆ ಮಾತನಾಡಿದ ಅಧಿಕಾರಿ ಮೃತರ ಕುಟುಂಬದಲ್ಲಿ ಮೂವರು ವಿವಾಹಿತ ಮಹಿಳೆಯರಿದ್ದಾರೆ. ವೃದ್ಧೆಯ ಮನೆಯನ್ನು ಪರಿಶೀಲಿಸಿದಾಗ ಮನೆಯ ಗೇಟ್ ಆಗಲಿ ಬೀಗವಾಗಲಿ ಮುರಿದಿರುವುದು ಕಂಡುಬಂದಿಲ್ಲ. ಈ ವಿಷಯದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದರು.

ಇದನ್ನೂ ಓದಿ:ಬೆಳಗಾವಿ: ಮಗಳಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ ತಂದೆ ಸೇರಿ ನಾಲ್ವರಿಗೆ ಚಾಕು ಇರಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.