ಚೆನ್ನೈ: ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಕಮ್ ಬ್ಯಾಟರ್ ರಿಷಭ್ ಪಂತ್ ಭರ್ಜರಿ ಶತಕ ಸಿಡಿಸಿದ್ದಾರೆ. ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡ ಪಂತ್ ಬಿರುಸಿನ ಬ್ಯಾಟಿಂಗ್ನೊಂದಿಗೆ 124 ಎಸೆತಗಳಲ್ಲಿ ಶತಕ ಪೂರೈಸಿದರು.
632 ದಿನಗಳ ಬಳಿಕ ಶತಕ: ಡಿಸೆಂಬರ್ 30, 2022 ರಂದು ಹೊಸ ವರ್ಷಾಚರಣೆಗೆಂದು ದಿಲ್ಲಿಯಿಂದ ಹುಟ್ಟೂರು ರೂರ್ಕಿಗೆ ಹೋಗುತ್ತಿದ್ದಾಗ ಪಂತ್ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಹೊತ್ತಿ ಉರಿದಿತ್ತು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಂತ್ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಗಾಯದಿಂದ ಚೇತರಿಸಿಕೊಳ್ಳಲು ಕ್ರಿಕೆಟ್ಗೆ ಮರಳಲು ಪಂತ್ 15 ತಿಂಗಳು ಸಮಯ ತೆಗೆದುಕೊಂಡಿದ್ದರು. ಅಪಘಾತದ ಬಳಿಕ ಅಂದ್ರೆ 638 ದಿನಗಳ ಬಳಿಕ ಪಂತ್ ಅವರಿಗೆ ಇದು ಮೊದಲ ಟೆಸ್ಟ್ ಪಂದ್ಯವಾಗಿದೆ.
ಇದರಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿರುವ ಪಂತ್ ಆಕರ್ಷಕ ಬ್ಯಾಟಿಂಗ್ ಮೂಲಕ ಸೆಂಚುರಿ ಸಿಡಿಸಿದ್ದಾರೆ. ಒಟ್ಟು 128 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಮತ್ತು 13 ಬೌಂಡರಿ ಸಹಾಯದೊಂದಿಗೆ 109 ರನ್ ಗಳಿಸಿ ಮೆಹದಿ ಹಸನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
PANT IS BACK.
— Johns. (@CricCrazyJohns) September 21, 2024
ONE-HANDED SIX IS BACK.
Test cricket is kicking again in India. pic.twitter.com/8QnZxjpGnE
ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದ ಪಂತ್ 50 ರನ್ಗಳನ್ನು ಪೂರೈಸಲು 88 ಎಸೆತಗಳನ್ನು ತೆಗೆದುಕೊಂಡಿದ್ದರು. ನಂತರ ಬ್ಯಾಟಿಂಗ್ ವೇಗ ಹೆಚ್ಚಿಸಿಕೊಂಡ 36 ಎಸೆತಗಳಲ್ಲಿ ಮತ್ತೇ ಐವತ್ತು ರನ್ ಪೂರ್ಣಗೊಳಿಸಿದರು.
WELL PLAYED, PANT...!!!!
— Johns. (@CricCrazyJohns) September 21, 2024
109 runs from just 128 balls including 13 fours & 4 sixes, A knock to remember forever, Welcome back, Pant. 👊 pic.twitter.com/TZMG400Khg
ಧೋನಿ ದಾಖಲೆ ಸರಿಗಟ್ಟಿದ ಪಂತ್: ಭಾರತ ಪರ ಟೆಸ್ಟ್ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ವಿಕೆಟ್ ಕೀಪರ್ ಆಗಿ ಧೋನಿ ಅವರ ದಾಖಲೆಯನ್ನು ಪಂತ್ ಸರಿಗಟ್ಟಿದ್ದಾರೆ. ಭಾರತದ ಮಾಜಿ ನಾಯಕ ಹಾಗೂ ಲೆಜೆಂಡರಿ ವಿಕೆಟ್ ಕೀಪರ್ ಎಮ್ ಎಸ್ ಧೋನಿ ಟೆಸ್ಟ್ನಲ್ಲಿ 6 ಶತಕಗಳನ್ನು ಸಿಡಿಸಿದ್ದಾರೆ, ಇದೀಗ ಪಂತ್ ಈ ಪಟ್ಟಿಗೆ ಸೇರಿದ್ದಾರೆ.
ಇದನ್ನೂ ಓದಿ: ನಾಟೌಟ್ ಆಗಿದ್ದರೂ ಪೆವಿಲಿಯನ್ ಸೇರಿದ ವಿರಾಟ್ ಕೊಹ್ಲಿ: ಅಸಮಾಧಾನ ಹೊರಹಾಕಿದ ರೋಹಿತ್! - Virat Kohli