ETV Bharat / crime

ವಿಷಕಾರಿ ಮದ್ಯ ಸೇವಿಸಿ ಮೂವರ ಸಾವು ಪ್ರಕರಣ : 6 ಮಂದಿ ಅರೆಸ್ಟ್​, ಇಬ್ಬರು ಕಾನ್ಸ್​​ಟೇಬಲ್​ ಸಸ್ಪೆಂಡ್​ - ಸಂಭಾಲ್ ಜಿಲ್ಲೆಯ ಗುನ್ನೌರ್‌

ಶಿವರಾತ್ರಿ ವೇಳೆ ಹೆಚ್ಚು ರಾಸಾಯನಿಕ ಬಳಸಿದ ಮದ್ಯವನ್ನು ತಯಾರಿಸಿ ಅಕ್ರಮವಾಗಿ ಗುನ್ನೌರ್‌ನಲ್ಲಿ ಮಾರಾಟ ಮಾಡಲಾಗಿದ್ದು, ಇದನ್ನು ಸೇವಿಸಿದ ಮೂವರು ಸಾವನ್ನಪ್ಪಿದ್ದಾರೆ.

6 arrested
6 ಮಂದಿ ಅರೆಸ್ಟ್
author img

By

Published : Mar 16, 2021, 7:36 AM IST

ಸಂಭಾಲ್ (ಉತ್ತರ ಪ್ರದೇಶ): ಗುನ್ನೌರ್‌ನಲ್ಲಿ ವಿಷಪೂರಿತ ಮದ್ಯ ಸೇವಿಸಿ ಮೃತಪಟ್ಟ ಮೂವರ ಸಾವು ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇಬ್ಬರು ಕಾನ್ಸ್​​ಟೇಬಲ್​ಗಳನ್ನು ಅಮಾನತು ಮಾಡಲಾಗಿದೆ.

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಗುನ್ನೌರ್‌ನಲ್ಲಿ ಶಿವರಾತ್ರಿ ವೇಳೆ ಹೆಚ್ಚು ರಾಸಾಯನಿಕ ಬಳಸಿದ ಮದ್ಯವನ್ನು ತಯಾರಿಸಿ ಅಕ್ರಮವಾಗಿ ಗ್ರಾಮದಲ್ಲಿ ಮಾರಾಟ ಮಾಡಲಾಗಿತ್ತು. ಇದನ್ನು ಸೇವಿಸಿದ ತಂದೆ, ಮಗ ಸೇರಿ ಮೂವರು ಸಾವನ್ನಪ್ಪಿದ್ದರು. ಈ ಬಗ್ಗೆ ಮಾಹಿತಿ ಬಂದರೂ ಗುನ್ನೌರ್‌ ಠಾಣಾ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಇದನ್ನೂ ಓದಿ: ದಿಢೀರನೇ ಪೊಲೀಸರ ಎದುರು ಹಾಜರಾದ ನಟೋರಿಯಸ್ ರೌಡಿಶೀಟರ್ ಸೈಕಲ್‌ ರವಿ

ಹೀಗಾಗಿ ಇಬ್ಬರು ಕಾನ್ಸ್​​ಟೇಬಲ್​ಗಳನ್ನು ಸಸ್ಪೆಂಡ್​ ಮಾಡಲಾಗಿದ್ದು, ಠಾಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತ ತನಿಖೆ ನಡೆಸಲು ಸೂಚಿಸಲಾಗಿದೆ. ಇನ್ನು ಮದ್ಯ ಮಾರಾಟ ಮಾಡಿದ ಗ್ರಾಮದ ಮುಖಂಡ, ಅವರ ಪತ್ನಿ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗುನ್ನೌರ್‌ ಪೊಲೀಸ್​ ವರಿಷ್ಠಾಧಿಕಾರಿ ಚಕ್ರೇಶ್​ ಮಿಶ್ರಾ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.