ETV Bharat / crime

ಚೀನಾದ ಆ್ಯಪ್‌ ಮೂಲಕ 50 ಕೋಟಿ ರೂ ವಂಚನೆ ಜಾಲ ಭೇದಿಸಿದ ಪೊಲೀಸರು

author img

By

Published : Aug 5, 2021, 7:10 AM IST

ವಂಚಕರ ತಂಡವೊಂದು ಒಂದು ಅಪ್ಲಿಕೇಷನ್​ ರಚಿಸಿ, ಆ ಅಪ್ಲಿಕೇಷನ್​ನ ಲಿಂಕ್​ ಅನ್ನು ಟೆಲಿಗ್ರಾಮ್​, ವಾಟ್ಸಪ್​, ಟೆಕ್ಸ್ಟ್​ ಮೆಸೇಜ್ ಮುಂತಾದ ಮಾರ್ಗಗಳ ಮೂಲಕ ವ್ಯಕ್ತಿಯ ಮೊಬೈಲ್​​ಗೆ ಕಳುಹಿಸುತ್ತದೆ. ಆ ಲಿಂಕ್​​ನ ಮೇಲೆ ವ್ಯಕ್ತಿ ಕ್ಲಿಕ್ ಮಾಡಿದ ತಕ್ಷಣ ವ್ಯಕ್ತಿಯ ಮೊಬೈಲ್​ನಲ್ಲಿ ಅಪ್ಲಿಕೇಷನ್ ಡೌನ್‌ಲೋಡ್‌ ಆಗುತ್ತದೆ. ಮುಂದೆ ಏನೆಲ್ಲಾ ತೊಂದರೆ ಉಂಟಾಗುತ್ತದೆ ಅನ್ನೋದನ್ನು ಇಲ್ಲಿ ತಿಳಿಸಿದ್ದೇವೆ.

50 crore scam exposed through Chinese application
ಚೀನಾದ ಅಪ್ಲಿಕೇಷನ್​​ನ ಮೂಲಕ 50 ಕೋಟಿ ವಂಚನೆ ಜಾಲ ಭೇದಿಸಿದ ಪೊಲೀಸರು

ಅಹಮದಾಬಾದ್​(ಗುಜರಾತ್)​: ಚೀನಾದ ಮೊಬೈಲ್ ಅಪ್ಲಿಕೇಷನ್​ಗಳ ಮೂಲಕ ಸುಮಾರು 50 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಗುಜರಾತ್​​ನ ಸೈಬರ್​ ಕ್ರೈಂ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ.

ಚೀನಾದ ಅಪ್ಲಿಕೇಷನ್​​ಗಳನ್ನು ಬಳಸಿಕೊಂಡು ವಿವಿಧ ಮಾರ್ಗಗಳ ಮೂಲಕ ಹಣವನ್ನು ದೋಚಲಾಗುತ್ತಿತ್ತು. ಈಗಾಗಲೇ ಸುಮಾರು 28 ಸಾವಿರ ಮಂದಿಗೆ ಇದೇ ರೀತಿ ವಂಚಿಸಲಾಗಿದೆ ಎಂದು ಪೊಲೀಸ್‌ ತನಿಖೆಯಿಂದ ತಿಳಿದುಬಂದಿದೆ. 6 ಸಾವಿರ ರೂಪಾಯಿ ವಂಚನೆ ಪ್ರಕರಣದ ತನಿಖೆ ವೇಳೆ ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ.

ವಂಚನೆ ಹೀಗೆ ನಡೆಯುತ್ತದೆ..

ವಂಚಕರ ತಂಡವೊಂದು ಒಂದು ಅಪ್ಲಿಕೇಷನ್​ ರಚಿಸಿ, ಆ ಅಪ್ಲಿಕೇಷನ್​ನ ಲಿಂಕ್​ ಅನ್ನು ಟೆಲಿಗ್ರಾಮ್​, ವಾಟ್ಸಪ್​, ಟೆಕ್ಸ್ಟ್​ ಮೆಸೇಜ್ ಮುಂತಾದ ಮಾರ್ಗಗಳ ಮೂಲಕ ವ್ಯಕ್ತಿಯ ಮೊಬೈಲ್​​ಗೆ ಕಳುಹಿಸುತ್ತದೆ. ಆ ಲಿಂಕ್​​ ಮೇಲೆ ವ್ಯಕ್ತಿ ಕ್ಲಿಕ್ ಮಾಡಿದ ತಕ್ಷಣ, ವ್ಯಕ್ತಿಯ ಮೊಬೈಲ್​ನಲ್ಲಿ ಅಪ್ಲಿಕೇಷನ್ ಡೌನ್‌ಲೋಡ್‌ ಆಗುತ್ತದೆ.

ಡಿಜಿಟಲ್​​ ವಾಲೆಟ್​​​ ರೀತಿಯ ಅಪ್ಲಿಕೇಷನ್ ಅದಾಗಿದ್ದು, ಕಮೀಷನ್ ಮತ್ತು ಹೆಚ್ಚುವರಿ ಹಣದ ಆಮಿಷಗಳನ್ನು ತೋರಿಸಿ, ವ್ಯಕ್ತಿಯನ್ನು ಆ ಅಪ್ಲಿಕೇಷನ್​ನಲ್ಲಿ ಹೂಡಿಕೆ ಮಾಡುವಂತೆ ಮಾಡಲಾಗುತ್ತದೆ. ಒಂದು ವೇಳೆ ವ್ಯಕ್ತಿ ಆ ಅಪ್ಲಿಕೇಷನ್​​​ನಲ್ಲಿ ಹಣ ಜಮಾವಣೆ ಮಾಡಿದರೆ, ಆತನ ಅಪ್ಲಿಕೇಷನ್ ವಾಲೆಟ್​​ನಲ್ಲಿ ಹಣ ಇರುವುದಾಗಿ ತೋರಿಸಲಾಗುತ್ತದೆ.

ಒಂದು ವೇಳೆ ವ್ಯಕ್ತಿ ಹಣವನ್ನು ವಿತ್​ ಡ್ರಾ ಮಾಡಲು ಯತ್ನಿಸಿದರೆ, ತಾಂತ್ರಿಕ ದೋಷ ಎಂದು ತೋರಿಸಲಾಗುತ್ತದೆ. ವ್ಯಕ್ತಿ ಹಣವನ್ನು ವಿತ್​ ಡ್ರಾ ಮಾಡಲು ಸತತವಾಗಿ ಪ್ರಯತ್ನಪಟ್ಟರೆ, ಆ ಅಪ್ಲಿಕೇಷನ್ ತಾನಾಗಿಯೇ ಕ್ಲೋಸ್ ಆಗುತ್ತದೆ. ಈ ಮೂಲಕ ವ್ಯಕ್ತಿ ಹಣ ಕಳೆದುಕೊಳ್ಳುತ್ತಾನೆ.

ಅಹಮದಾಬಾದ್ ಸೈಬರ್ ಕ್ರೈಂ ಪೊಲೀಸರು 6 ಸಾವಿರ ರೂಪಾಯಿ ವಂಚನೆ ದೂರನ್ನು ತನಿಖೆ ನಡೆಸಿದಾಗ ಈ ಬೃಹತ್ ಮೊತ್ತದ ಹಗರಣ ಗೊತ್ತಾಗಿದೆ. ಯಾಸಿನ್ ಖುರೇಶಿ, ದಿಲೀಪ್ ಗೊಜಿಯಾ, ಧರ್ಮೇಂದ್ರ ಸಿಂಗ್ ರಾಥೋರ್, ರಾಹುಲ್ ವಾಧರ್, ಜಯೇಶ್ ಜಾಗಿಯಾ ಮತ್ತು ತುಷಾರ್ ಘೆಟಿಯಾ ಎಂಬುವವರನ್ನು ಬಂಧಿಸಲಾಗಿದೆ. ಈ ಜಾಲದ ರೂವಾರಿಗಳು ಚೀನಾದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆಂದು ತಿಳಿದುಬಂದಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಐಸಿಸ್​ ನಂಟು: ಉಳ್ಳಾಲ ಮಾಜಿ ಶಾಸಕ ಬಿಎಂ ಇದಿನಬ್ಬ ಮೊಮ್ಮಗ ಸೇರಿ ನಾಲ್ವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.