ಅಮೃತಸರ: ಪಂಜಾಬ್ನಲ್ಲಿನ ಭಾರತ-ಪಾಕಿಸ್ತಾನ ಗಡಿಯಲ್ಲಿ ಮೂವರು ಡ್ರಗ್ ಪೆಡ್ಲರ್ಗಳನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಬಂಧಿಸಿದೆ.
ಪಂಜಾಬ್ನ ಗಡಿಭಾಗವಾದ ಫತೇಪುರದಲ್ಲಿ ತಡರಾತ್ರಿ ಐವರು ವ್ಯಕ್ತಿಗಳ ಅನುಮಾಸ್ಪದ ಚಲನೆಯನ್ನು ಬಿಎಸ್ಎಫ್ ಸಿಬ್ಬಂದಿ ಗಮನಿಸಿದ್ದಾರೆ. ಇವರೆಲ್ಲರೂ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ತಿಳಿದು ಬಂದಿದ್ದು, ಓರ್ವನ ಮೇಲೆ ಬಿಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದು, ಆತನನ್ನು ಅಮೃತಸರದ ಗುರುನಾನಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: 66 ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ; ಕೊನೆಗೂ ಖತರ್ನಾಕ್ ಆಸಾಮಿ ಅರೆಸ್ಟ್
ಮೂವರನ್ನು ಬಂಧಿಸಲಾಗಿದ್ದು, ಹಿರಿಯ ಬಿಎಸ್ಎಫ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಓರ್ವ ಪರಾರಿಯಾಗಿದ್ದಾನೆ.