ಬರ್ನಾಲಾ (ಪಂಜಾಬ್): ಮದುವೆಗೆ ನಿರಾಕರಿಸಿದ್ದಕ್ಕೆ 22 ವರ್ಷದ ಯುವತಿಯನ್ನು ಅಪಹರಿಸಿ, ಆಕೆಯನ್ನು ಗೃಹ ಬಂಧನಲ್ಲಿಟ್ಟು ಎಂಟು ತಿಂಗಳುಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಪಂಜಾಬ್ನ ಬರ್ನಾಲಾದಲ್ಲಿ ನಡೆದಿದೆ.
ಪ್ರಕರಣ ಹಿನ್ನೆಲೆ
2020ರ ಜೂನ್ನಲ್ಲಿ ಯುವತಿ ಮಾರ್ಕೆಟ್ಗೆ ಹೋಗಿದ್ದ ವೇಳೆ ಆಕೆಗೆ ಪರಿಚಯವಿದ್ದ ಮಹಿಳೆಯೊಬ್ಬರು ತಮ್ಮ ಮನೆಗೆ ಕರೆದುಕೊಂಡು ಹೋಗಿ ಪಾನೀಯದಲ್ಲಿ ಮಾದಕ ವಸ್ತು ಹಾಕಿ ಕೊಟ್ಟಿದ್ದಾರೆ. ಇದನ್ನು ಕುಡಿದ ಯುವತಿ ಪ್ರಜ್ಞೆ ತಪ್ಪಿದ್ದು, ಎಚ್ಚರವಾಗುವಷ್ಟರಲ್ಲಿ ಆಕೆಯನ್ನು ಮದುವೆಯಾಗಲು ಬಯಸಿದ್ದ ಯುವಕನ ಮನೆಯಲ್ಲಿದ್ದಳು. ಆತ ಹಾಗೂ ಆತನ ಸ್ನೇಹಿತರಾದ ಮೂವರು ಪೊಲೀಸರು, ದೇವಸ್ಥಾನದ ಅರ್ಚಕ ಸೇರಿ ಆರು ಮಂದಿ ಎಂಟು ತಿಂಗಳುಗಳ ಕಾಲ ಲೈಂಗಿಕ ದೌರ್ಜನ್ಯ ನೀಡಿದ್ದಾರೆ.
ಇದನ್ನೂ ಓದಿ: ಮಹಜರಿಗೆ ಕರೆದುಕೊಂಡು ಹೋದಾಗ ಪತ್ನಿ-ಮಗಳ ಕಂಡು ಮುಜುಗರ: ಕಟ್ಟಡದಿಂದ ಹಾರಿ ಆರೋಪಿ ಆತ್ಮಹತ್ಯೆ!
ಮೊನ್ನೆ ಫೆ.23ರಂದು ಯುವತಿ ಅಲ್ಲಿಂದ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದು, ಓರ್ವ ಮಹಿಳೆ ಸೇರಿ ಏಳು ಮಂದಿ ಆರೋಪಿಗಳನ್ನು ಬರ್ನಾಲಾ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಪೊಲೀಸರನ್ನು ಅಮಾನತು ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.