ETV Bharat / crime

ದಲ್ಲಾಳಿ ಮೇಲೆ ಹಲ್ಲೆ ನಡೆಸಿ 18 ಲಕ್ಷ ರೂ. ಲೂಟಿ ಮಾಡಿದ ದುಷ್ಕರ್ಮಿಗಳು - ರಾಜಸ್ಥಾನದ ಭಿಲ್ವಾಡಿ ಜಿಲ್ಲೆ

ಆಸ್ತಿ ವ್ಯವಹಾರದ ದಲ್ಲಾಳಿ ಹಾಗೂ ಇತರರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು 18 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದಾರೆ.

rajasthan crime
rajasthan crime
author img

By

Published : Jun 11, 2021, 4:38 PM IST

ಭಿಲ್ವಾಡ (ರಾಜಸ್ಥಾನ): ಹಾಡಹಗಲೇ ಆಸ್ತಿ ವ್ಯವಹಾರದ ದಲ್ಲಾಳಿ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಹಲ್ಲೆ ನಡೆಸಿ 18 ಲಕ್ಷ ರೂ. ಎಗರಿಸಿ ಪರಾರಿಯಾಗಿರುವ ಘಟನೆ ರಾಜಸ್ಥಾನದ ಭಿಲ್ವಾಡಿ ಜಿಲ್ಲೆಯ ಭೀಮ್‌ಗಂಜ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡ ದಲ್ಲಾಳಿ ದಿಲೀಪ್ ಲಾಹೋತಿ ಹಾಗೂ ಇತರರನ್ನು ಚಿಕಿತ್ಸೆಗಾಗಿ ಮಹಾತ್ಮ ಗಾಂಧಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುಗಳು ಆಸ್ಪತ್ರೆಗೆ ದಾಖಲು

ಮಾಹಿತಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶರ್ಮಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಸಿಂಗ್ ಜೋಧಾ ಹಾಗೂ ಭೀಮ್‌ಗಂಜ್ ಠಾಣಾ ಉಸ್ತುವಾರಿ ಸುರೇಶ್ ಚೌಧರಿ ಭೇಟಿ ನೀಡಿ, ಗಾಯಾಳುಗಳೊಂದಿಗೆ ಮಾತನಾಡಿ ಘಟನೆಯ ಬಗ್ಗೆ ವಿವರಣೆ ಪಡೆದಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.