ETV Bharat / crime

ದಕ್ಷಿಣ ಮೆಕ್ಸಿಕೋದಲ್ಲಿ ವ್ಯಾನ್​ಗಳ ಮುಖಾಮುಖಿ ಡಿಕ್ಕಿ, 12 ಮಂದಿ ದುರ್ಮರಣ - ಎರಡು ವ್ಯಾನ್‌ಗಳು ಡಿಕ್ಕಿಯಾಗಿ 12 ಮಂದಿ ಸಾವು

ಮಧ್ಯ ಅಮೆರಿಕದ ರಾಷ್ಟ್ರವಾದ ಮೆಕ್ಸಿಕೋದ ದಕ್ಷಿಣದಲ್ಲಿರುವ ಚಿಯಾಪಾಸ್‌ ರಾಜ್ಯದಲ್ಲಿ ಭೀಕರ ರಸ್ತೆ ಅಪಘಾತ ಜರುಗಿದ್ದು, 12 ಮಂದಿ ಸಾವನ್ನಪ್ಪಿ, ಮೂವರು ಹೊಂಡುರಾಸ್ ಪ್ರಜೆಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

12 killed after vans collide in south Mexico
ದಕ್ಷಿಣ ಮೆಕ್ಸಿಕೋದಲ್ಲಿ ವ್ಯಾನ್​ಗಳ ಮುಖಾಮುಖಿ ಡಿಕ್ಕಿ, 12 ಮಂದಿ ದುರ್ಮರಣ
author img

By

Published : Nov 10, 2021, 10:41 AM IST

ಚಿಯಾಪಾಸ್(ಮೆಕ್ಸಿಕೋ): ದಕ್ಷಿಣ ಮೆಕ್ಸಿಕೋದ ರಾಜ್ಯವಾದ ಚಿಯಾಪಾಸ್‌ನಲ್ಲಿರುವ ಹೆದ್ದಾರಿಯಲ್ಲಿ ಎರಡು ವ್ಯಾನ್‌ಗಳು ಡಿಕ್ಕಿ ಹೊಡೆದು ಕನಿಷ್ಠ 12 ಜನರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಾಯಗೊಂಡವರು ಮಧ್ಯ ಅಮೆರಿಕದ ರಾಷ್ಟ್ರವಾದ ಹೊಂಡುರಾಸ್​ನ ಪ್ರಜೆಗಳು ಎಂದು ತಿಳಿದುಬಂದಿದ್ದು, ಗಾಯಗೊಂಡವರನ್ನು ಪ್ಯಾಲೆಂಕ್ಸ್ ಜನರಲ್ ಆಸ್ಪತ್ರೆಗೆ ವರ್ಗಾಯಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

  • #FGE abre carpeta de investigación en contra de quien o quienes resulten responsables del percance entre dos unidades en el municipio de #Palenque #Chiapas. Se informa que perdieron la vida 12 personas aún no identificadas y resultaron lesionadas tres #hondureños. pic.twitter.com/4fBIY0Kf39

    — 𝔈𝔡𝔦𝔱𝔥 𝔖𝔬𝔩𝔢𝔡𝔞𝔡 (@edysolfa) November 9, 2021 " class="align-text-top noRightClick twitterSection" data=" ">

ಸ್ಥಳೀಯ ಕಾಲಮಾನ ಮುಂಜಾನೆ 5 ಗಂಟೆಗೆ ಪಾಲೆಂಕ್ ಮತ್ತು ಪ್ಲ್ಯಾಸ್ ಡಿ ಕ್ಯಾಟಝಾಜಾ ಹೆದ್ದಾರಿಯಲ್ಲಿ ಎರಡು ಟೊಯೋಟಾ ಹಿಯಾಸ್ ವಾಹನಗಳು ಪರಸ್ಪರ ಡಿಕ್ಕಿಯಾಗಿ, ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ ಎಂದು ಸರ್ಕಾರದ ನಾಗರಿಕ ರಕ್ಷಣಾ ಸಂಸ್ಥೆಯ ಅಧಿಕಾರಿಗಳು ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಒಂದು ವ್ಯಾನ್​​ನಲ್ಲಿ ಏಳು ಮಂದಿ, ಮತ್ತೊಂದು ವ್ಯಾನ್​ನಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರದ ಪ್ರಾಸಿಕ್ಯೂಟರ್ ಕಚೇರಿ ಹೇಳಿಕೆ ನೀಡಿದೆ. ಮೃತದೇಹಗಳನ್ನು ಫೋರೆನ್ಸಿಕ್ ಮೆಡಿಕಲ್ ಸರ್ವೀಸ್​ಗೆ ರವಾನಿಸಲಾಗಿದೆ.

ಮೃತಪಟ್ಟವರು ಗುರುತು ಇನ್ನೂ ಪತ್ತೆಯಾಗಿಲ್ಲ. ಕೆಲವು ಮೂಲಗಳ ಪ್ರಕಾರ ಮಧ್ಯ ಅಮೆರಿಕದಿಂದ ವಲಸೆ ಬಂದವರು ಆಗಿರಬಹುದೆಂದು ಹೇಳಲಾಗುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯ ನಂತರವೇ ಪೂರ್ಣ ಮಾಹಿತಿ ಹೊರಬರಲಿದೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಪ್ರವಾಸೋದ್ಯಮ ಚೇತರಿಕೆ: ಭಾರತೀಯ ಪ್ರವಾಸಿಗರೇ ಹೆಚ್ಚು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.