ಪ್ರತಾಪ್ಗಢ (ಉತ್ತರ ಪ್ರದೇಶ): ಬರೋಬ್ಬರಿ 10 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯವನ್ನು ಉತ್ತರ ಪ್ರದೇಶದ ಪ್ರತಾಪ್ಗಢ ಜಿಲ್ಲೆಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಪಂಚಾಯತ್ ಚುನಾವಣೆ ಬರಲಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ. ನಿಖರ ಮಾಹಿತಿ ಮೇರೆಗೆ ಪ್ರತಾಪ್ಗಢದ ಕುಂದಾ ವೃತ್ತದ ಬಳಿ ಫಾರ್ಮ್ ಹೌಸ್ವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ನೆಲದಲ್ಲಿ ಹೂತು ಹಾಕಿ ಅಡಗಿಸಿಟ್ಟಿದ್ದ 23 ಸಾವಿರ ಮದ್ಯದ ಬಾಟಲಿಗಳನ್ನು ಹಾಗೂ 96 ಡ್ರಮ್‌ಗಳಲ್ಲಿ ತುಂಬಿಟ್ಟಿದ್ದ ಮದ್ಯವನ್ನು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಪಾನಮತ್ತನಾಗಿ ಮಗನ ಮನೆಗೆ ಬೆಂಕಿಯಿಟ್ಟ ತಂದೆ: ಆರು ಮಂದಿಯ ದಾರುಣ ಸಾವು
ವಶಪಡಿಸಿಕೊಂಡಿರುವ ಮದ್ಯದ ಮೌಲ್ಯ ಸುಮಾರು 10 ಕೋಟಿ ರೂ. ಆಗಿದೆ. ಪ್ರಕರಣ ಸಂಬಂಧ 30 ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಫಾರ್ಮ್ ಹೌಸ್ ಮಾಲೀಕ ಗುಡ್ಡು ಸಿಂಗ್ ಪರಾರಿಯಾಗಿದ್ದು, ಆತನಿಗಾಗಿ ಬಲೆ ಬೀಸಿರುವುದಾಗಿ ಎಸ್ಪಿ ಆಕಾಶ್ ತೋಮರ್ ತಿಳಿಸಿದ್ದಾರೆ.