ತುಮಕೂರು : ಸಿಎಂ ಬದಲಾವಣೆ ವಿಚಾರವಾಗಿ ವೈರಲ್ ಆಗಿರುವ ಆಡಿಯೋ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರದ್ದೇ, ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಕೆ ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಟೀಲ್ ಮಾತನಾಡಿರೋದು ಸತ್ಯನೇ ಇರುತ್ತದೆ. ಅಸತ್ಯ ಮಾತಾಡೋ ಪ್ರಮೇಯ ಅವರಿಗಿಲ್ಲ. ಈಗ ತಾರ್ಕಿಕ ಅಂತ್ಯ ಕಾಣಿಸೋ ಕೆಲಸ ಮಾಡಿದ್ದಾರೆ. ಯಡಿಯೂರಪ್ಪಗೆ ವಯೋಸಹಜವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಹಾಗಾಗಿ, ಕೆಳಗಿಳಿಸಲು ಮುಂದಾಗಿದ್ದಾರೆ. ಕಟೀಲ್ ಹೇಳಿಕೆಗೂ ಹೈಕಮಾಂಡ್ ಚಿಂತನೆಗೂ ಸಾಮ್ಯತೆ ಇದೆ ಎಂದರು.
ಪ್ರಲ್ಹಾದ್ ಜೋಶಿ ಮುಂದಿನ ಸಿಎಂ
ಬಿಜೆಪಿಯ ಈ ಬೆಳವಣಿಗೆ ಕಾಂಗ್ರೆಸ್ಗೆ ಲಾಭವಾಗಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸಂಘಟನೆ ಮಾಡಲಿದೆ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ್ರೆ ಬಿಜೆಪಿಗೆ ಹೋದವರು ಮರಳಿ ಬರುತ್ತಾರೆ. ವಾಪಸ್ ಬಾರದೆ ಹೋದ್ರೆ ಒಂದು ವರ್ಷ ಮುಂಚೆನೇ ಚುನಾವಣೆ ಬರುತ್ತೆ. ಪ್ರಲ್ಹಾದ್ ಜೋಶಿ ಅವರನ್ನ ಸಿಎಂ ಮಾಡುತ್ತಾರೆ ಎಂಬ ಮಾಹಿತಿ ಇದೆ. ಜೋಶಿ ಕೇಂದ್ರದಲ್ಲಿ ವಿಶ್ವಾಸದಲ್ಲಿ ಇದ್ದಾರೆ ಎಂದು ಭವಿಷ್ಯ ನುಡಿದರು.