ETV Bharat / city

ತುಮಕೂರು: ಶಾಲೆಗೆ ಬಾರದ ವಿದ್ಯಾರ್ಥಿ ಕರೆತರಲು ಹೋದ ಶಿಕ್ಷಕನ ಮೇಲೆ ಪಾನಮತ್ತ ಇಬ್ಬರಿಂದ ಹಲ್ಲೆ - ವಿದ್ಯಾರ್ಥಿ ಕರೆತರಲು ಹೋದ ಶಿಕ್ಷಕನಿಗೆ ಗೂಸಾ

ವಿದ್ಯಾರ್ಥಿ ಶಾಲೆಗೆ ಬಾರದ್ದನ್ನು ವಿಚಾರಿಸಲು ತೆರಳಿದ್ದ ಶಿಕ್ಷಕನ ಮೇಲೆಯೇ ಸ್ಥಳೀಯರಿಬ್ಬರು ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಸಬಾ ಹೋಬಳಿಯ ಲಾಳಾಪುರ ಗ್ರಾಮದಲ್ಲಿ ನಡೆದಿದೆ.

assaulted by teacher
ಶಿಕ್ಷಕನ ಮೇಲೆ ಪಾನಮತ್ತರಿಬ್ಬರಿಂದ ಹಲ್ಲೆ
author img

By

Published : Dec 7, 2021, 9:46 PM IST

ತುಮಕೂರು: ವಿದ್ಯಾರ್ಥಿ ಶಾಲೆಗೆ ಬಾರದ್ದನ್ನು ವಿಚಾರಿಸಲು ತೆರಳಿದ್ದ ಶಿಕ್ಷಕನ ಮೇಲೆಯೇ ಸ್ಥಳೀಯರಿಬ್ಬರು ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಸಬಾ ಹೋಬಳಿಯ ಲಾಳಾಪುರ ಗ್ರಾಮದಲ್ಲಿ ನಡೆದಿದೆ. ಕುಣಿಗಲ್ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಜಿ.ಆರ್. ನಾಗರಾಜ್ ಹಲ್ಲೆಗೊಳಗಾದವರು. ಮದ್ಯಪಾನ ಮಾಡಿದ್ದ ಇಬ್ಬರು ಶಿಕ್ಷಕರ ಹಲ್ಲೆ ಮಾಡಿದ್ದಾರೆ.

ಅನೇಕ ದಿನಗಳಿಂದ ಲಾಳಾಪುರ ಕಾಲೋನಿಯ ವಿದ್ಯಾರ್ಥಿ ಸೋಮಶೇಖರ್ ಶಾಲೆಗೆ ಬಾರದೇ ಗೈರಾಗಿದ್ದ. ಹೀಗಾಗಿ ವಿದ್ಯಾರ್ಥಿಯನ್ನು ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ತಿಳಿ ಹೇಳಲು ಶಿಕ್ಷಕ ನಾಗರಾಜ್ ತೆರಳಿದ್ದರು. ಅಲ್ಲದೇ ಪೋಷಕರ ಬಳಿ ಮಾತನಾಡುತ್ತಿದ್ದ ವೇಳೆ, ಸಮೀಪದಲ್ಲೆ ಕುಳಿತಿದ್ದ ಪ್ರಸಾದ್ ಎಂಬ ವ್ಯಕ್ತಿಯೊಬ್ಬ ಬಂದು ನಮ್ಮ ಮಕ್ಕಳನ್ನು ಯಾಕೆ ವಿಚಾರಿಸುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ.. ಬಿಜೆಪಿ ಜೊತೆ ಮೈತ್ರಿ ಇಲ್ಲ: ಹೆಚ್.ಡಿ. ಕುಮಾರಸ್ವಾಮಿ

ಇದಕ್ಕೆ ಶಿಕ್ಷಕ ನಾಗರಾಜ್ ನೀವು ಯಾರು ಎಂದು ಪರಿಚಯವಿಲ್ಲ ಎಂದರು. ಇದರಿಂದ ಕೋಪಗೊಂಡ ಪ್ರಸಾದ್ ಹಲ್ಲೆ ನಡೆಸಿದ್ದಾನೆ. ನಂತರ ಪಕ್ಕದಲ್ಲೇ ಇದ್ದ ಮತ್ತೊಬ್ಬ ಬಂದು ಶಿಕ್ಷಕರ ಕಪಾಳಕ್ಕೆ ಹೊಡೆದಿದ್ದಾನೆ.

ಬಳಿಕ ಇಬ್ಬರೂ ಸೇರಿ ಹಲ್ಲೆ ಮಾಡಿದ್ದರೆ. ಈ ವೇಳೆ, ಶಿಕ್ಷಕ ನಾಗರಾಜ್ ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಘಟನೆ ಕುರಿತಂತೆ ಮುಖ್ಯ ಶಿಕ್ಷಕ ನಾಗರಾಜ್ ಕುಣಿಗಲ್ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.