ತುಮಕೂರು: ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಹಾಸ್ಟೆಲ್ ನಲ್ಲಿ ಮೂಲಭೂತ ಸಮಸ್ಯೆಗಳಿಂದ ಬೇಸತ್ತ ವಿದ್ಯಾರ್ಥಿಗಳು ತರಗತಿಗಳಿಗೆ ಹೋಗದೆ ಹಾಸ್ಟೆಲ್ನಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಹಾಸ್ಟೆಲ್ ನಲ್ಲಿ ಮೂಲಭೂತ ಸಮಸ್ಯೆಗಳು ಹೆಚ್ಚಾಗಿದ್ದು, ಅಡುಗೆ ಮಾಡಲು ಬಳಸುವ ತರಕಾರಿಗಳು ಹಾಳಗಿರುತ್ತವೆ. ದವಸ ದಾನ್ಯಗಳನ್ನು ಸಂಗ್ರಹಿಸಿಡಲು ರೂಮಿನ ವ್ಯವಸ್ಥೆ ಇಲ್ಲ, ಅದೇ ರೀತಿ ಅಡುಗೆ ಮಾಡಲು ಬಳಸುವ ವಸ್ತುಗಳನ್ನು ಸಹ ಕಾಲಕಾಲಕ್ಕೆ ಶುಚಿಗೊಳಿಸುತ್ತಿಲ್ಲ. ಈ ಸಮಸ್ಯೆಗಳ ಬಗ್ಗೆ ವಾರ್ಡನ್ ರನ್ನು ಸಂಪರ್ಕಿಸಿದರೆ, ನಾನು ಈಗ ಬರಲು ಸಾಧ್ಯವಾಗುವುದಿಲ್ಲ, ನಿಮಗೆ ಏನು ಮಾಡಿಕೊಳ್ಳಲಾಗುತ್ತದೆ ಅದನ್ನು ಮಾಡಿಕೊಳ್ಳಿ ಎಂದು ಅಸಡ್ಡೆಯ ಮಾತುಗಳನ್ನು ಹೇಳುತ್ತಾರೆ ಎಂದು ದೂರಿದರು.
ಈ ಸಮಸ್ಯೆಗಳ ಬಗ್ಗೆ ಈಗಾಗಲೇ ಅನೇಕ ಬಾರಿ ಕುಲಪತಿಗಳಿಗೆ ತಿಳಿಸಲಾಗಿದೆ ಆದರೂ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ. ಮೇಲಾಧಿಕಾರಿಗಳು ಬಂದರೂ ವಿದ್ಯಾರ್ಥಿಗಳನ್ನು ಸಮಾಧಾನಿಸಿ ಹೋಗುತ್ತಾರೆಯೇ ಹೊರತು ಪರಿಹಾರ ಸೂಚಿಸುವುದಿಲ್ಲ. ಇನ್ನು ನಮ್ಮ ಸಮಸ್ಯೆಗಳನ್ನು ನಾವು ಮಾಧ್ಯಮದಲ್ಲಿ ಹೇಳಿಕೊಂಡರೆ ನಮ್ಮ ತರಗತಿಗಳ ಮೇಲಧಿಕಾರಿಗಳಿಗೆ ತಿಳಿಸಿ, ಇಂಟರ್ನಲ್ ಮಾರ್ಕ್ ಗಳನ್ನು ಕಡಿಮೆ ನೀಡುವಂತೆ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು.