ETV Bharat / city

ಭಾರತ್​ ಬಂದ್: ತುಮಕೂರಿನಲ್ಲಿ ವಿವಿಧ ಸಂಘಗಳಿಂದ ಭಿನ್ನ ನಿಲುವು - ಭಾರತ್​ ಬಂದ್

ನಾಳೆ ನಡೆಯಲಿರುವ ಭಾರತ್ ಬಂದ್‌ಗೆ ತುಮಕೂರು ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳು ವಿಭಿನ್ನ ನಿಲುವು ವ್ಯಕ್ತಪಡಿಸಿವೆ. ಬಂದ್​​ಗೆ ಬೆಂಬಲ ನೀಡುವುದಾಗಿ ಹಲವು ಸಂಘಟನೆಗಳು ಹೇಳಿದರೆ, ಇನ್ನೂ ಕೆಲವು ಸಂಘಟನೆಗಳು ನೈತಿಕ ಬೆಂಬಲ ಸೂಚಿಸುವುದಾಗಿ ತಿಳಿಸಿವೆ.

ತುಮಕೂರು
ತುಮಕೂರು
author img

By

Published : Sep 26, 2021, 6:54 PM IST

ತುಮಕೂರು: ನಾಳೆ ನಡೆಯಲಿರುವ ಭಾರತ್ ಬಂದ್‌ಗೆ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತ ಸಂಘ, ಹಸಿರು ಸೇನೆ, ಕೃಷಿಕ ಸಮಾಜ ಹಾಗೂ ರೈತಪರ ಸಂಘಟನೆಗಳು ಬಂದ್​​ಗೆ ಬೆಂಬಲ ವ್ಯಕ್ತಪಡಿಸಿವೆ.

ಅದೇ ರೀತಿ ಎಐಟಿಯುಸಿ, ಸಿಐಟಿಯು, ಸಿಪಿಐಎಂ ಹಾಗೂ ಕಾರ್ಮಿಕ ಸಂಘಟನೆಗಳು, ಕರವೇ, ಜಯ ಕರ್ನಾಟಕ, ಕನ್ನಡಪರ ಸಂಘಟನೆಗಳು, ಡಿಎಸ್​​ಎಸ್ ಹಾಗೂ ದಲಿತ ಪರ ಸಂಘಟನೆಗಳು, ಎನ್​​ಎಫ್​​ಐಡಬ್ಲೂ, ಜನವಾದಿ ಮಹಿಳಾ ಸಂಘಟನೆ, ಎಎಸ್​​ಎಫ್ , ಎಐಡಿಎಫ್​​ಓ, ಕೋಳಗೇರಿ ಸಂಘಟನೆಗಳು ಕೂಡ ಬೆಂಬಲ ಸೂಚಿಸಿವೆ.

ಇನ್ನೊಂದೆಡೆ ಭಾರತ್ ಬಂದ್​ ಬಗ್ಗೆ ಯಾವುದೇ ರೀತಿಯ ಸಹಕಾರ ಕೊಡುವುದಿಲ್ಲ. ತಟಸ್ಥ ನಿಲುವು ಹೊಂದಿದ್ದೇವೆ. ನೈತಿಕ ಬೆಂಬಲ ಮಾತ್ರ ನೀಡುತ್ತೇವೆ ಎಂದು ಅನೇಕ ಸಂಘಟನೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

ಅವುಗಳಲ್ಲಿ ಹೋಟೆಲ್​​ ಮಾಲೀಕರ ಸಂಘಟನೆ, ಕೆಎಸ್​​ಆರ್​​ಟಿಸಿ, ರುಪ್ಸಾ, ಖಾಸಗಿ ಬಸ್ ಮಾಲೀಕರ ಸಂಘ, ಆಟೋ ಚಾಲಕರು ಮತ್ತು ಮಾಲೀಕರ ಸಂಘ ನೈತಿಕ ಬೆಂಬಲ ಸೂಚಿಸಿವೆ. ಲಾರಿ ಮಾಲೀಕರ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘ, ಜಿಲ್ಲಾ ವರ್ತಕರ ಸಂಘಗಳು ತಟಸ್ಥ ನಿಲುವು ಹೊಂದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.