ETV Bharat / city

ತುಮಕೂರು ಮಹಾನಗರ ಪಾಲಿಕೆಯಿಂದ ಹೊರೆಯಿಲ್ಲದ ಉಳಿತಾಯ ಬಜೆಟ್ ಮಂಡನೆ

ತುಮಕೂರು ಮಹಾನಗರ ಪಾಲಿಕೆಗೆ ಲಭ್ಯವಿರುವ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು 2021-22ನೇ ಸಾಲಿನಲ್ಲಿ 250.66 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಲಾಗಿದೆ.

author img

By

Published : Apr 10, 2021, 10:14 AM IST

Tumkur Metropolitan city budget
ತುಮಕೂರು ಮಹಾನಗರ ಪಾಲಿಕೆಯಿಂದ ಹೊರೆಯಿಲ್ಲದ ಉಳಿತಾಯ ಬಜೆಟ್ ಮಂಡನೆ

ತುಮಕೂರು: ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ 2021-22ನೇ ಸಾಲಿನ ಆಯವ್ಯಯ ಸಭೆಯಲ್ಲಿ 250.66 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು.

ಬಜೆಟ್ ಮಂಡಿಸಿದ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ನಳೀನ ಇಂದ್ರಕುಮಾರ್, ಪಾಲಿಕೆಯು ತನ್ನ ಆರ್ಥಿಕ ಇತಿ-ಮಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಆಯವ್ಯಯ ಅಂದಾಜನ್ನು ತಯಾರಿಸಲಾಗಿದೆ. ಈ ಆಯವ್ಯಯದನ್ವಯ ಒಟ್ಟು ಆರಂಭಿಕ ಶಿಲ್ಕು 2091.45 ಲಕ್ಷ ರೂ. ಸೇರಿ 22,996.10 ಲಕ್ಷ ರೂ.ಗಳ ಒಟ್ಟು ಅಂದಾಜು ಸ್ವೀಕೃತಿ ಹಣದಲ್ಲಿ 2021-22ನೇ ಸಾಲಿಗಾಗಿ 22745.44 ಲಕ್ಷ ರೂ.ಗಳ ಅಂದಾಜು ವೆಚ್ಚ ಮಾಡಲು ಬಜೆಟ್ ಮಂಡಿಸಲಾಗಿದ್ದು, 250.66 ಲಕ್ಷ ರೂ.ಗಳು ಮಿಗತೆಯಲ್ಲಿದೆ ಎಂದು ತಿಳಿಸಿದರು.

ಹಣಕಾಸು ನಿರ್ವಹಣೆ

ಪ್ರಸಕ್ತ ಸಾಲಿನಲ್ಲಿ ಪಾಲಿಕೆಯಿಂದ ಒಟ್ಟು 20,904.65 ಲಕ್ಷಗಳ ಸ್ವೀಕೃತಿಯನ್ನು ನಿರೀಕ್ಷಿಸಲಾಗಿದ್ದು, ಈ ಪೈಕಿ ಸ್ವಂತ ಸಂಪನ್ಮೂಲಗಳಿಂದ 6049.65ಲಕ್ಷ ರೂ. ಹಾಗೂ ಸರ್ಕಾರದ ಅನುದಾನಗಳಿಂದ 14,855 ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆಯು ಪಾಲಿಕೆಯ ಪ್ರಮುಖ ಆದಾಯ ಮೂಲವಾಗಿದ್ದು, ಕಟ್ಟಡ ಮತ್ತು ಭೂಮಿ ಮೇಲಿನ ಆಸ್ತಿ ತೆರಿಗೆಯಿಂದ 3200 ಲಕ್ಷ ರೂ. (ಸೆಸ್ ಸೇರಿ) ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆ ಮೇಲಿನ ದಂಡದ ರೂಪದಲ್ಲಿ 200 ಲಕ್ಷ ರೂ.ಗಳನ್ನು ಸಂಗ್ರಹಿಸಲು ಅಂದಾಜಿಸಲಾಗಿದೆ. ಆಸ್ತಿ ಹಕ್ಕು ಬದಲಾವಣೆಗೆ 100 ಲಕ್ಷ ಹಾಗೂ ಆಸ್ತಿ ನಕಲು ಶುಲ್ಕ 5 ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿದೆ.

ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ನೈರ್ಮಲ್ಯ ಉಪಕರದಿಂದ 200ಲಕ್ಷ ರೂ., ಕುಡಿಯುವ ನೀರಿನ ಶುಲ್ಕ 1200 ಲಕ್ಷ ರೂ., ಹೊಸ ಕೊಳಾಯಿ ಜೋಡಣಾ ಶುಲ್ಕ 30ಲಕ್ಷ ರೂ., ಅನಧಿಕೃತ ಕೊಳಾಯಿಗಳ ಸಕ್ರಮೀಕರಣದಿಂದ 20ಲಕ್ಷ ರೂ., ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರು ಮಾರಾಟದಿಂದ 56ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿದೆ.

ಒಳಚರಂಡಿ ಶುಲ್ಕ 100 ಲಕ್ಷ ರೂ., ಒಳಚರಂಡಿ ಸಂಪರ್ಕದಿಂದ 100ಲಕ್ಷ ರೂ., ಹಾಗೂ ಅನಧಿಕೃತ ಒಳಚರಂಡಿ ಸಂಪರ್ಕ ಸಕ್ರಮದಿಂದ 20ಲಕ್ಷ ರೂ.ಗಳ ಆದಾಯ, ಅಂಗಡಿ ಮಳಿಗೆಗಳ ಬಾಡಿಗೆಯಿಂದ 158ಲಕ್ಷ ರೂ., ಕಟ್ಟಡ ಪರವಾನಗಿ ಶುಲ್ಕ ವಸೂಲಿಯಿಂದ 100ಲಕ್ಷ ರೂ.; ಕೆರೆಗಳ ಪುನರುಜ್ಜೀವನ ಶುಲ್ಕ ವಸೂಲಾತಿಯಿಂದ 20ಲಕ್ಷ ರೂ., ಉದ್ದಿಮೆ ಪರವಾನಗಿ ಶುಲ್ಕದಿಂದ 15ಲಕ್ಷ ರೂ., ಜಾಹೀರಾತು ತೆರಿಗೆ ರೂಪದಲ್ಲಿ 15ಲಕ್ಷ ರೂ., ಅಧಿಭಾರ ಶುಲ್ಕದಿಂದ (ಸ್ಟಾಂಪ್ ಡ್ಯೂಟಿ) 50ಲಕ್ಷ ರೂ., ಅಭಿವೃದ್ಧಿ ಮತ್ತು ಸುಧಾರಣಾ ಶುಲ್ಕದಿಂದ 15ಲಕ್ಷ ರೂ., ರಸ್ತೆ ಕಡಿತ ಶುಲ್ಕದಿಂದ 100 ಲಕ್ಷ ರೂ., ವಿವಿಧ ಬ್ಯಾಂಕ್‍ಗಳಲ್ಲಿ ಪಾಲಿಕೆ ಹೊಂದಿರುವ ಖಾತೆಗಳಲ್ಲಿ ನಿರ್ವಹಿಸಿದ ಹಣದ ಮೇಲೆ 100ಲಕ್ಷ ರೂ.ಗಳ ಬಡ್ಡಿ, ವಾಹನ ನಿಲುಗಡೆ ಶುಲ್ಕದಿಂದ 10ಲಕ್ಷ ರೂ., ಮಾರುಕಟ್ಟೆ ಶುಲ್ಕದಿಂದ 6ಲಕ್ಷ ರೂ., ಬಸ್ ನಿಲುವಳಿ ಶುಲ್ಕ 20ಲಕ್ಷ ರೂ. ಜನನ-ಮರಣ ಪ್ರಮಾಣ ಪತ್ರ, ಟೆಂಡರ್ ಫಾರಂ ವಿತರಣೆ, ಘನತ್ಯಾಜ್ಯ ಸಂಸ್ಕರಣಾ ಮಾರಾಟ, ಅನುಪಯುಕ್ತ ವಸ್ತುಗಳ ವಿಲೇವಾರಿ, ಮತ್ತಿತರ ದಂಡಗಳಿಂದ 74.65ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಅನುದಾನಗಳು
ಪಾಲಿಕೆಗೆ 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ವಿವಿಧ ಅನುದಾನಗಳನ್ನು ನಿರೀಕ್ಷಿಸಲಾಗಿದ್ದು, ಅಧಿಕಾರಿ/ ಸಿಬ್ಬಂದಿ ವರ್ಗದವರಿಗೆ ವೇತನ ಮತ್ತಿತರೆ ಸೌಲಭ್ಯಗಳ ಎಸ್‍ಎಫ್‍ಸಿ ವೇತನದಡಿ 1800 ಲಕ್ಷ ರೂ., ನಗರದ ಅಭಿವೃದ್ಧಿಗಾಗಿ ಎಸ್‍ಎಫ್‍ಸಿ ಮುಕ್ತ ನಿಧಿಯಡಿ 500 ಲಕ್ಷ ರೂ., ಎಸ್‍ಎಫ್‍ಸಿ ವಿಶೇಷ ಅನುದಾನವಾಗಿ 1,000 ಲಕ್ಷ ರೂ.(ಹೆಚ್ಚುವರಿ)ಗಳನ್ನು ನಿರೀಕ್ಷಿಸಲಾಗಿದೆ.

ಓದಿ: ಮಸ್ಕಿ ಉಪಚುನಾವಣೆ: ಇಂದು ಸಿಎಂ ಬಿಎಸ್​ವೈರಿಂದ ಭರ್ಜರಿ ಮತಬೇಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.