ETV Bharat / city

ಆಡಂಬರದ ಗಣೇಶ ನಿಮಜ್ಜನಕ್ಕೆ ತುಮಕೂರು ಮಹಾನಗರ ಪಾಲಿಕೆ ಬ್ರೇಕ್ - extravagant Ganeshotsav

ಪರಿಸರದ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ತುಮಕೂರು ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಗೆ ಬರುವ 35 ವಾರ್ಡ್​ಗಳಲ್ಲಿ ಅನೇಕ ನಿಯಮಗಳನ್ನು ಜಾರಿಗೊಳಿಸಿ, ಆಡಂಬರದ ಗಣೇಶ ನಿಮಜ್ಜನಕ್ಕೆ ಬ್ರೇಕ್ ಹಾಕಿದೆ.

ತುಮಕೂರು ಮಹಾನಗರ ಪಾಲಿಕೆ
author img

By

Published : Sep 8, 2019, 10:26 AM IST

ತುಮಕೂರು: ಪಾಲಿಕೆ ಪರಿಸರದ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ತುಮಕೂರು ಮಹಾನಗರ ಪಾಲಿಕೆ, ತನ್ನ ವ್ಯಾಪ್ತಿಗೆ ಬರುವ ವಾರ್ಡ್​ಗಳಿಗೆ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿ ಆಡಂಬರದ ಗಣೇಶ ನಿಮಜ್ಜನಕ್ಕೆ ಬ್ರೇಕ್ ಹಾಕಿದೆ.

ಹೌದು, ತುಮಕೂರು ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಗೆ ಬರುವ 35 ವಾರ್ಡ್​ಗಳಲ್ಲಿಯೂ ಅನೇಕ ನಿಯಮಗಳನ್ನು ಜಾರಿಗೊಳಿದೆ. ಪಿಒಪಿ ಅಥವಾ ಬಣ್ಣ ಲೇಪಿತ ಗಣೇಶ ವಿಗ್ರಹಗಳ ನಿಷೇಧ, ಅನುಮತಿ ನೀಡಿದ ಸ್ಥಳದಲ್ಲಿ ಮಾತ್ರ ಗಣಪತಿ ಕೂರಿಸುವುದು, ಧ್ವನಿವರ್ಧಕಗಳನ್ನು ಬೆಳೆಸಬೇಕೆಂದರೆ ಪೊಲೀಸರ ಅನುಮತಿ ಪಡೆಯುವುದು, ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶ, ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆಯ ನಿಷೇಧ, ನಿಗದಿತ ಪ್ರದೇಶಗಳಲ್ಲಿ ಗಣಪತಿಯನ್ನು ನಿಮಜ್ಜನ ಹಾಗೂ ನಿಮಜ್ಜನ ಬಳಿಕ ಆ ಸ್ಥಳವನ್ನು ಗಣೇಶ ಕಮಿಟಿ ತನ್ನ ಸ್ವಂತ ಹಣದಲ್ಲಿ ಸ್ವಚ್ಛತೆಯನ್ನು ಮಾಡಿಸಬೇಕು ಎಂಬ ನಿಯಮಗಳನ್ನು ಹೇರಿ ಪರಿಸರ ರಕ್ಷಣೆಗೆ ಮುಂದಾಗಿದೆ.

ಬಟವಾಡಿಯ ಆಂಜನೇಯ ದೇವಸ್ಥಾನ, ಶೆಟ್ಟಿಹಳ್ಳಿ ರಸ್ತೆಯ ರಾಘವೇಂದ್ರ ಸ್ವಾಮಿ ಮಠದ ಬಳಿ ಸೇರಿದಂತೆ ನಗರದ ವಿವಿಧೆಡೆ ಚಿಕ್ಕ ಚಿಕ್ಕ ಗಣಪತಿಗಳ ನಿಮಜ್ಜನಕ್ಕೆ ಅವಕಾಶ ನೀಡಲಾಗಿದೆ. ಇನ್ನು ದೊಡ್ಡ ವಿಗ್ರಹಗಳ ನಿಮಜ್ಜನಕ್ಕೆಂದು ಹನುಮಂತಪುರ ಬಳಿ ಇರುವ ಬೆಳಗುಂಬ ಪ್ರದೇಶದಲ್ಲಿ ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಮಾಡಲಾಗಿದೆ.

Intro:ತುಮಕೂರು: ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ಬದಲಾವಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ತುಮಕೂರು ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಗೆ ಬರುವ ವಾರ್ಡ್ ಗಳಿಗೆ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸುವ ಮೂಲಕ ಆಡಂಬರದ ಗಣೇಶೋತ್ಸವಕ್ಕೆ ಬ್ರೇಕ್ ಹಾಕಿದೆ ಎಂದರೆ ತಪ್ಪಾಗಲಾರದು.

Body:ಹೌದು ತುಮಕೂರು ಮಹಾನಗರ ಪಾಲಿಕೆ ಪರಿಸರದ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ನಿಯಮಗಳನ್ನು ಜಾರಿಗೊಳಿಸುವ ಮೂಲಕ ನಿಗದಿತ ಪ್ರದೇಶಗಳಲ್ಲಿ ಗಣಪತಿಯನ್ನು ವಿಸರ್ಜಿಸಲು ಅನುವು ಮಾಡಿಕೊಟ್ಟಿದೆ.
ತನ್ನ ವ್ಯಾಪ್ತಿಗೆ ಬರುವ 35 ವಾರ್ಡ್ ಗಳಲ್ಲಿಯೂ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವ ಮೂಲಕ ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ಬಣ್ಣ ಲೇಪಿತ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವುದನ್ನು ನಿಷೇಧಿಸಿದೆ.
ಅನುಮತಿ ನೀಡಿದ ಸ್ಥಳದಲ್ಲಿ ಮಾತ್ರ ಗಣಪತಿಯನ್ನು ಕೂರಿಸುವುದು, ಧ್ವನಿವರ್ಧಕಗಳನ್ನು ಬೆಳೆಸಬೇಕೆಂದರೆ ಪೊಲೀಸರ ಅನುಮತಿ ಪಡೆಯುವುದು ಜೊತೆಗೆ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶ ನೀಡಲಾಗಿದೆ, ಗಣಪತಿಯನ್ನು ವಿಸರ್ಜನೆ ಮಾಡಿದ ನಂತರ ಆ ಸ್ಥಳವನ್ನು ಸ್ವಂತ ಹಣದಲ್ಲಿ ಸ್ವಚ್ಛತೆಯನ್ನು ಮಾಡಿಸಬೇಕು, ಪ್ಲಾಸ್ಟಿಕ್ ಬಳಕೆಯ ನಿಷೇಧ ಎಂಬ ವಿಷಯಗಳನ್ನಿಟ್ಟುಕೊಂಡು ಪರಿಸರ ರಕ್ಷಣೆಗೆ ಮುಂದಾಗಿದೆ.
ಇನ್ನು ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಲು ಬಟವಾಡಿಯ ಆಂಜನೇಯ ದೇವಸ್ಥಾನದ ಬಳಿ, ಶೆಟ್ಟಿಹಳ್ಳಿ ರಸ್ತೆಯ ರಾಘವೇಂದ್ರ ಸ್ವಾಮಿ ಮಠದ ಬಳಿ, ಮಹಾನಗರ ಪಾಲಿಕೆ ಕಚೇರಿ ಆವರಣ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ, 7ನೇ ವಾರ್ಡಿನ ಅಗ್ರಹಾರ ಶಿಶುವಿಹಾರದ ಹತ್ತಿರ, ಕ್ಯಾತಸಂದ್ರದ ಬಸ್ ನಿಲ್ದಾಣದ ಬಳಿ ಹಾಗೂ ವಿದ್ಯಾನಗರದ ಆರ್ ಟಿ ಓ ಕಚೇರಿ ಹಿಂಭಾಗದಲ್ಲಿರುವ ಮಹಾನಗರ ಪಾಲಿಕೆ ವಾಟರ್ ಹೌಸ್ ಬಳಿ ಚಿಕ್ಕ ಚಿಕ್ಕ ಗಣಪತಿಗಳನ್ನು ವಿಸರ್ಜನೆ ಮಾಡಲು ಅವಕಾಶ ನೀಡಲಾಗಿದೆ. ದೊಡ್ಡ ವಿಗ್ರಹಗಳನ್ನು ಹನುಮಂತಪುರ ಬಳಿ ಇರುವ ಬೆಳಗುಂಬ ಪ್ರದೇಶದಲ್ಲಿ ಮಹಾನಗರ ಪಾಲಿಕೆ ವತಿಯಿಂದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Conclusion:ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.