ETV Bharat / city

ನಿರಂತರ ಮಳೆ:ಭರ್ತಿಯಾದ ಸಿದ್ದಗಂಗೆ ತೀರ್ಥೋದ್ಭವ ಸ್ಥಳ - ಸಿದ್ದಲಿಂಗೇಶ್ವರ ದೇವಸ್ಥಾನ

ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠದಲ್ಲಿರುವ ಸಿದ್ದಗಂಗೆ ತೀರ್ಥೋದ್ಭವ ಸ್ಥಳ ಸಂಪೂರ್ಣವಾಗಿ ಪುಣ್ಯ ಜಲದಿಂದ ಭರ್ತಿಯಾಗಿದೆ.

Tirthodbhava in Siddaganga
ಭರ್ತಿಯಾದ ಸಿದ್ದಗಂಗೆ ತೀರ್ಥೋದ್ಭವ ಸ್ಥಳ
author img

By

Published : Aug 9, 2022, 12:22 PM IST

ತುಮಕೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠದಲ್ಲಿರುವ ಸಿದ್ದಗಂಗೆ ಪವಿತ್ರ ತೀರ್ಥೋದ್ಭವ ಸ್ಥಳ ಸಂಪೂರ್ಣವಾಗಿ ಪುಣ್ಯ ಜಲದಿಂದ ಭರ್ತಿಯಾಗಿದೆ. ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಭಕ್ತರು ಆಗಮಿಸುತ್ತಿದ್ದಾರೆ.

ಸಿದ್ದಲಿಂಗೇಶ್ವರ ದೇವಸ್ಥಾನದ ಎದುರಿಗಿರುವ ಸಿದ್ದಗಂಗೆ ತುಮಕೂರಿನ ಸಿದ್ದಗಂಗ ಮಠದ ಬೆಟ್ಟದ ಮೇಲಿರುವ ಪುಣ್ಯಕ್ಷೇತ್ರ. ಗೋಸಲ ಸಿದ್ದೇಶ್ವರರು ತಮ್ಮ ಪಾದದಿಂದ ಬಂಡೆಗೆ ಗುದ್ದಿ ನೀರು ಹರಿಸಿದ್ದರು ಎಂಬ ಪ್ರತೀತಿಯಿದೆ. ಈ ನೀರು ಹರಿದ ಸ್ಥಳವನ್ನು ಸಿದ್ದಗಂಗೆ ಎಂದು ಕರೆಯಲಾಗುತ್ತಿದೆ.

1300 ರಿಂದ 1350 ಸಂದರ್ಭದಲ್ಲಿ ಸಿದ್ದಗಂಗೆ ಮಠಕ್ಕೆ ಭೇಟಿ ನೀಡಿದ್ದ ಗೋಸಲ ಸಿದ್ದೇಶ್ವರರು ತಮ್ಮ 101 ಶಿಷ್ಯರೊಂದಿಗೆ ಇದೇ ಜಾಗದಲ್ಲಿ ತಪೋನುಷ್ಠಾನ ಮಾಡಿದ್ದರು. ತಪಸ್ಸು ಮಾಡಿವ ವೇಳೆ ಬಾಯಾರಿಕೆಯಾದಗ ನೀರಿಗಾಗಿ ಬಂಡೆಗೆ ಕಾಲಿನಲ್ಲಿ ಗುದ್ದಿದರಂತೆ. ಆಗ ಬಂಡೆಯಿಂದ ನೀರು ಉಕ್ಕಿ ಹರಿದಿತ್ತು ಎಂಬ ಪ್ರತೀತಿ ಇದೆ. ಅಂದಿನಿಂದ ಇಂದಿನವರೆಗೂ ವರ್ಷವಿಡಿ ಇಲ್ಲಿ ನೀರು ಇರುತ್ತದೆ.

ಇದನ್ನೂ ಓದಿ: ತುಮಕೂರು: ತೋಟಕ್ಕೆ ನುಗ್ಗಿದ ಕೆರೆ ನೀರು, ನೂರಾರು ಎಕರೆ ಅಡಕೆ ಬೆಳೆ ನಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.