ತುಮಕೂರು: ರಾಜ್ಯದ ಕೆಲವೆಡೆ ಬೆಂಬಿಡದೆ ಮಳೆ ಸುರಿಯುತ್ತಿದ್ರೆ, ಇನ್ನೂ ಹಲವೆಡೆ ತೀವ್ರ ಬರಗಾಲವಿದೆ. ಬಿಸಿಲಿನ ಬೇಗೆಗೆ ಬೆಂಡಾದ ಕಲ್ಪತರು ನಾಡಿನ ಜನರು, ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಳೆಗಾಗಿ ಜಿಲ್ಲೆಯ ಮಧುಗಿರಿ ಪಟ್ಟಣದ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಪರ್ಜನ್ಯ ಹೋಮ ನೆರವೇರಿಸಲಾಯಿತು. ಈ ವೇಳೆ ಪುರೋಹಿತರು ನೀರು ತುಂಬಿದ ಡ್ರಮ್ಗಳಲ್ಲಿ ನಿಂತು ಋಷ್ಯಶೃಂಗ ದೇವರ ಜಪ ಮಾಡಿದರು. 11 ಜನ ಪುರೋಹಿತರು ಮಂತ್ರಗಳನ್ನು ಪಠಿಸಿದರು.
ಎರಡು ದಿನಗಳ ಕಾಲ ನಡೆದ ಪೂಜಾ ಕೈಂಕಾರ್ಯದಲ್ಲಿ ಸಮೃದ್ಧ ಮಳೆಯಾಗಲೆಂದು ಪ್ರಾರ್ಥಿಸಿ ಗಣಪತಿ ಪೂಜೆ, ಏಕಾದಶಿ, ಉದಕ ಶಾಂತಿ, ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ ನಡೆಸಲಾಯಿತು.
ಇದನ್ನೂ ಓದಿ: ಮನಸ್ತಾಪದಿಂದ ತಾಯಿ ಮನೆಯಲ್ಲೇ ಉಳಿದ ಪತ್ನಿ: ನಾದಿನಿಯ ಜೊತೆ ಗಂಡ ಪರಾರಿ