ETV Bharat / city

ಜನರಿಂದ ದಾನ ಸ್ವೀಕರಿಸಿ ಜಾತ್ರೆಗೆ ಆಹ್ವಾನಿಸಿದ ಸಿದ್ದಗಂಗಾ ಶ್ರೀಗಳು

ಸಿದ್ದಗಂಗಾ ಮಠದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವ ಹಿನ್ನೆಲೆ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಗಳು ಜನರ ಬಳಿಗೆ ತೆರಳಿ ದಾನ ಸ್ವೀಕರಿಸಿ ಬಳಿಕ ಜಾತ್ರೆಗೆ ಬರುವಂತೆ ಆಹ್ವಾನಿಸಿದರು.

siddalinga swamiji invited people for siddaganga fair
ಜನರಿಂದ ದಾನ ಸ್ವೀಕರಿಸಿ ಜಾತ್ರೆಗೆ ಆಹ್ವಾನಿಸಿದ ಸಿದ್ದಲಿಂಗ ಸ್ವಾಮೀಜಿ
author img

By

Published : Feb 23, 2022, 5:57 PM IST

Updated : Feb 23, 2022, 7:16 PM IST

ತುಮಕೂರು: ಸಿದ್ದಗಂಗಾ ಮಠದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಸಕ್ರಿಯವಾಗಿ ನಾಗರಿಕರೆಲ್ಲರೂ ಭಾಗವಹಿಸಬೇಕು ಎಂಬ ಉದ್ದೇಶದಿಂದ ಸ್ವತಃ ಸಿದ್ದಲಿಂಗ ಸ್ವಾಮೀಜಿ ಜನರ ಬಳಿಗೆ ತೆರಳಿ ದಾನ ಸ್ವೀಕರಿಸಿದರು.

ಮಂಡಿಪೇಟೆ, ಎಂಜಿ ರಸ್ತೆ ಸೇರಿದಂತೆ ಸುತ್ತಮುತ್ತಲ ಅಂಗಡಿ ಮಳಿಗೆಗಳಿಗೆ ಸ್ವಾಮೀಜಿ ತೆರಳಿ ನಗದು ಹಾಗೂ ದಿನಸಿ ಪದಾರ್ಥಗಳನ್ನು ಭಕ್ತರಿಂದ ಪಡೆದರು. ಅದೇ ರೀತಿ ಸ್ವಾಮೀಜಿ ಎಲ್ಲ ಅಂಗಡಿ ಮಾಲೀಕರಿಗೆ ಜಾತ್ರಾ ಮಹೋತ್ಸವಕ್ಕೆ ಬರುವಂತೆ ಆತ್ಮೀಯವಾಗಿ ಆಹ್ವಾನ ನೀಡಿದರು.

ಜನರಿಂದ ದಾನ ಸ್ವೀಕರಿಸಿ ಜಾತ್ರೆಗೆ ಆಹ್ವಾನಿಸಿದ ಸಿದ್ದಗಂಗಾ ಶ್ರೀಗಳು

ಇದನ್ನೂ ಓದಿ: ಕಬ್ಬಿಣದ ಸರಪಳಿ ತುಂಡು ಮಾಡಿ, ಕೈಕಾಲಿಗೆ ಸಲಾಕೆ ಚುಚ್ಚಿಕೊಳ್ಳುವ ಗೊರವಯ್ಯ: ಇದು ಮೈಲಾರಲಿಂಗನ ಪವಾಡವಂತೆ!

ಕೋವಿಡ್​ ಹಿನ್ನೆಲೆ, ಕಳೆದ ಬಾರಿಯಂತೆ ಈ ಬಾರಿಯೂ ಸರಳವಾಗಿ ಜಾತ್ರೆ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವನ್ನು ಜಾತ್ರಾ ಮಹೋತ್ಸವದಲ್ಲಿ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಸ್ವಾಮೀಜಿ ಇದೇ ವೇಳೆ ತಿಳಿಸಿದರು.

Last Updated : Feb 23, 2022, 7:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.