ತುಮಕೂರು : ನಗರದ ಎಂಜಿ ರಸ್ತೆಯಲ್ಲಿ ಏಕಾಏಕಿ ರಸ್ತೆ ಕುಸಿತ ಉಂಟಾಗಿ ಬೃಹತ್ ಕಂದಕ ನಿರ್ಮಾಣವಾಗಿದೆ. ಇದರಿಂದ ಕೆಲಕಾಲ ವಾಹನ ಚಾಲಕರು, ಸಾರ್ವಜನಿಕರು ಆತಂಕಕ್ಕೆ ಒಳಗಾದರು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಸುಮಾರು ಎರಡು ಅಡಿ ಅಗಲದ ಬೃಹತ್ ಕಂದಕ ನಿರ್ಮಾಣವಾಗಿದ್ದು, ಕೆಳಭಾಗದಲ್ಲಿ ಕೊಳಚೆ ನೀರು ಸಂಗ್ರಹವಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದೇ ಈ ರೀತಿ ರಸ್ತೆ ಏಕಾಏಕಿ ಕುಸಿದು ಬೀಳಲು ಕಾರಣವಾಗಿದೆ. ಅಲ್ಲದೆ ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಒಳಚರಂಡಿ ಸುಭದ್ರವಾಗಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡದಿರುವುದು ಈ ಘಟನೆಗೆ ಕಾರಣವಾಗಿದೆ.
ಸದ್ಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸುತ್ತಲೂ ಪೈಪ್ಗಳನ್ನು ಹಾಕಿ ಸಾರ್ವಜನಿಕರು ಸಮೀಪ ಹೋಗದಂತೆ ಎಚ್ಚರಿಕೆ ನೀಡಿದರು.