ತುಮಕೂರು: ನಗರದ ರೇಣುಕ ವಿದ್ಯಾಪೀಠದಲ್ಲಿ ಪ್ರಾರಂಭಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಪ್ರತಿದಿನ ರಂಗಗೀತೆಗಳನ್ನು ಹಾಡಲಾಗುತ್ತಿದೆ.
ನಗರದ ವಿವಿಧ ಕಲಾತಂಡಗಳು ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮ ನಡೆಸಿ ಕೊಡುತ್ತಿವೆ. ಕೋವಿಡ್ ಆರೈಕೆ ಕೇಂದ್ರದಲ್ಲಿ 50ಕ್ಕೂ ಹೆಚ್ಚು ಸೋಂಕಿತರಿದ್ದು, ಕೇಂದ್ರದ ಕಾಂಪೌಂಡ್ ಹೊರಗಡೆ ಟೇಬಲ್ ಹಾಕಿಕೊಂಡು ಕಲಾವಿದರು ಹಾಡು ಹಾಡುತ್ತಿದ್ದಾರೆ.
ಸೋಂಕಿತರು ಕಾಂಪೌಂಡ್ ಒಳಗಡೆ ಕೂತು ಹಾಡು ಕೇಳುತ್ತಿದ್ದು, ಈ ಮೂಲಕ ಸೋಂಕಿತರಲ್ಲಿ ಧೈರ್ಯ ತುಂಬಲಾಗುತ್ತಿದೆ.
ಓದಿ: ಆನ್ಲೈನ್ ತರಗತಿಗಾಗಿ ಪ್ರತಿದಿನ 6 ಕಿಮೀ ಪ್ರಯಾಣಿಸುವ ವಿದ್ಯಾರ್ಥಿಗಳು