ತುಮಕೂರು : ಯಾರು ಏನ್ ಬೇಕಾದ್ರು ಹೇಳಿಕೊಳ್ಳಲಿ ಕಾಂಗ್ರೆಸ್ಗೆ ಏನೂ ಮಾಡೋಕಾಗಲ್ಲ, ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಗಳಿಗೆ ಕುಟುಂಬ ಕಾರ್ಯಕ್ರಮದ ಆಮಂತ್ರಣ ನೀಡಲಿಕ್ಕೆ ಬಂದಿದ್ದೇನೆ ಎಂದು ತಿಳಿಸಿದರು. ಅಲ್ಲದೆ, ಜನವರಿ 20 ರಂದು ರೈತರ ಪರವಾಗಿ ಕಾಂಗ್ರೆಸ್ ಪಕ್ಷ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.
ಫ್ರೀಡಂ ಪಾರ್ಕ್‌ನ ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದೇವೆ. ಇಡೀ ರಾಷ್ಟ್ರದಲ್ಲಿ ಇಂಥ ದೊಡ್ಡ ಹೋರಾಟ ನಡೆದಿರಲಿಲ್ಲ. ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ, ಕಮಿಟಿ ಮಾಡಿರೋದನ್ನ ರೈತರು ಧಿಕ್ಕರಿಸಿದ್ದಾರೆ. ನಮಗೆ ಅವಶ್ಯಕತೆ ಇಲ್ಲ ಎಂದು ಹೋರಾಟ ಮುಂದುವರೆಸಿದ್ದಾರೆ. ಇದು ರೈತ ಸಮುದಾಯಕ್ಕೆ, ದೇಶಕ್ಕೆ ಮರಣ ಶಾಸನವಾಗಿದೆ ಎಂದರು.
ಓದಿ-ಕೆಲ ಹೊತ್ತಲ್ಲೇ ಪ್ರವಾಸಿ ಮಂದಿರಕ್ಕೆ ಅಮಿತ್ ಶಾ ಆಗಮನ : ಅತೃಪ್ತರ ದೌಡು
ಇದನ್ನ ವಾಪಸ್ ಪಡೆಯಬೇಕು ಎಂದು ನಾವೆಲ್ಲಾ ಹೋರಾಟ ಮಾಡ್ತೇವೆ. ಬೆಲೆ ಏರಿಕೆಗಳು, ಪೆಟ್ರೋಲ್, ಡೀಸೆಲ್, ಪ್ರಾಪರ್ಟಿ, ಟಾಕ್ಸ್, ಕೊರೊನಾ ಸಂದರ್ಭದಲ್ಲಿ ಹೆಚ್ಚು ಮಾಡಿರೋದು ಗಮನಿಸಿದ್ದೇವೆ ಎಂದರು.
ಬಿಜೆಪಿಯಲ್ಲಿ ಪ್ರಾದೇಶಿಕ ಸಂಸ್ಕೃತಿಗೆ ಬೆಲೆ ಇಲ್ಲ
ಸ್ವಂತ ಅಜೆಂಡಾ ಮೇಲೆ ಸರ್ಕಾರ ನಡೀತಿದೆ. ಸಾರ್ವಜನಿಕರ ಅಭಿಪ್ರಾಯದಂತೆ ನಡೀತಿಲ್ಲ. ಅಮಿತ್ ಶಾ ವೇದಿಕೆಯಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ಕೊಟ್ಟಿಲ್ಲ. ಪ್ರಾದೇಶಿಕ ಸಂಸ್ಕೃತಿ, ಭಾಷೆ ಯಾವುದೂ ಅವರಿಗೆ ಬೇಕಿಲ್ಲದಂತಾಗಿದೆ. ನಮ್ಮ ಎಂಪಿಗಳು ಅಧಿಕಾರಕ್ಕಾಗಿ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಟೀಕಿಸಿದರು.