ETV Bharat / city

ಕಾಂಗ್ರೆಸ್​​ನವರು ಭ್ರಷ್ಟರು, ಭ್ರಷ್ಟಾಚಾರವೇ ಅವರ ಬದುಕು: ನಳಿನ್ ಕುಮಾರ್ ಕಟೀಲ್ ಕಿಡಿ - ಕೋವಿಡ್​​​-19 ಅವ್ಯವಹಾರ

ಸಿದ್ದರಾಮಯ್ಯನವರ ಭ್ರಷ್ಟಾಚಾರ ಆರೋಪದ ವಿರುದ್ಧ ಹರಿಹಾಯ್ದಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್​ ಕುಮಾರ್​ ಕಟೀಲ್, ಕಾಂಗ್ರೆಸ್​ನವರು ಭ್ರಷ್ಟಾಚಾರಿಗಳು, ಭ್ರಷ್ಟಾಚಾರವೇ ಅವರ ಬದುಕು, ಜೀವನವಾಗಿದೆ. ಹಾಗಾಗಿ ಇನ್ನೊಬ್ಬರು ಅದನ್ನೇ ಮಾಡುತ್ತಾರೆ ಎಂದು ತಿಳಿದುಕೊಂಡಿದ್ದಾರೆ ಸಿದ್ದರಾಮಣ್ಣ ಎಂದು ತಿರುಗೇಟು ನೀಡಿದ್ದಾರೆ.

nalin-kumar-kateel-statement-on-corona-corruption
ನಳಿನ್ ಕುಮಾರ್ ಕಟೀಲ್
author img

By

Published : Jul 23, 2020, 8:21 PM IST

ತುಮಕೂರು : ಕಾಮಾಲೆ ರೋಗದವರಿಗೆ ಎಲ್ಲವೂ ಹಳದಿಯಾಗಿ ಕಾಣುತ್ತದೆ. ಕಾಂಗ್ರೆಸ್​​ನವರು ಭ್ರಷ್ಟಾಚಾರಿಗಳು, ಭ್ರಷ್ಟಾಚಾರವೇ ಅವರ ಬದುಕು, ಜೀವನವಾಗಿದೆ. ಹಾಗಾಗಿ ಇನ್ನೊಬ್ಬರು ಅದನ್ನೇ ಮಾಡುತ್ತಾರೆ ಎಂದು ತಿಳಿದುಕೊಂಡಿದ್ದಾರೆ ಸಿದ್ದರಾಮಣ್ಣ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ತಿರುಗೇಟು

ಶಿರಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಗುಣಮಟ್ಟದ ಪಿಪಿಇ ಕಿಟ್​ಗಳನ್ನು ಕೊಡಲಾಗಿದೆ. ಸರ್ಕಾರ ಕೂಡ ಯಶಸ್ವಿಯಾಗಿ ಇದೆಲ್ಲವನ್ನು ನಿರ್ವಹಣೆ ಮಾಡುತ್ತಿದೆ. ಕಾಂಗ್ರೆಸ್​ನವರಿಗೆ ಇದೆಲ್ಲವನ್ನೂ ಸಹಿಸಲು ಆಗುತ್ತಿಲ್ಲ. ಹೀಗಾಗಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಸಿದ್ದರಾಮಣ್ಣ ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಜ್ಯದಲ್ಲಿ 21 ಮಂದಿ ಬಿಜೆಪಿ ಕಾರ್ಯಕರ್ತರ ಹತ್ಯೆಗಳಾಗಿದ್ದವು. ಅಲ್ಲದೆ ಡೆಂಗ್ಯೂ ಪ್ರಕರಣಗಳು ವಿಪರೀತಕ್ಕೆ ಹೋಗಿತ್ತು. ಆಗ ಆಸ್ಪತ್ರೆಗಳಲ್ಲಿ ಔಷಧಿಗಳು ಇರಲಿಲ್ಲ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ನಡೆದಂತಹ ಭ್ರಷ್ಟಾಚಾರಗಳು, ವಸತಿ ಹಂಚುವಿಕೆಯಲ್ಲಿ ಅವ್ಯವಹಾರ, ಇಂದಿರಾ ಕ್ಯಾಂಟೀನ್​ನಲ್ಲಿ ಅವ್ಯವಹಾರಗಳ ಇವೆಲ್ಲವೂಗಳನ್ನು ಇದೀಗ ಭಾರತೀಯ ಜನತಾ ಪಕ್ಷದ ಸರ್ಕಾರದ ಮೇಲೆ ಹೊರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು. ಓರ್ವ ಹಿರಿಯ ಮುತ್ಸದ್ದಿ ರಾಜಕಾರಣಿಯಾಗಿ ಜನರ ಪ್ರಾಣ ರಕ್ಷಣೆಯ ಸಂದಿಗ್ಧತೆಯಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಬೇಕಿದೆ. ಅದನ್ನು ಬಿಟ್ಟು ಚಿಲ್ಲರೆ ರಾಜಕಾರಣ ಮಾಡುವುದು ಶೋಭೆ ತರುವಂತದ್ದಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.