ತುಮಕೂರು: 25 ಸಾವಿರ ರೂಪಾಯಿ ಮೌಲ್ಯದ 5 ಲೀಟರ್ನ ಆಕ್ಸಿಜನ್ ಸಿಲಿಂಡರ್ ಇಂದು 60ರಿಂದ 80 ಸಾವಿರ ರೂ.ವರೆಗೆ ಮಾರಾಟವಾಗುತ್ತಿದೆ. 9 ಲೀಟರ್ನ ಆಕ್ಸಿಜನ್ ಸಿಲಿಂಡರ್ 75ರಿಂದ 1 ಲಕ್ಷ ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಬೇಸರ ವ್ಯಕ್ತಪಡಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳುಹಿಸುವ ಸ್ಥಳದಲ್ಲಿಯೇ 3 ಪಟ್ಟು ಆಕ್ಸಿಜನ್ ದರ ಹೆಚ್ಚಿಸಲಾಗಿದೆ. ಇದರಿಂದ 10 ರೂ. ಬೆಲೆ ಬಾಳುವುದನ್ನು 30 ರೂಪಾಯಿಗೆ ಖರೀದಿಸುವಂತಾಗಿದೆ. ತುಮಕೂರು ಜಿಲ್ಲೆಗೆ ಸರಿಯಾಗಿ ಆಕ್ಸಿಜನ್ ಸರಬರಾಜು ಆಗುತ್ತಿದೆ. ತಾಲೂಕು ಕೆಂದ್ರದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದರಿಂದ ಜನರು ಜಿಲ್ಲಾ ಕೇಂದ್ರಕ್ಕೆ ಚಿಕಿತ್ಸೆಗೆ ಬಂದರು. ಇದರಿಂದ ಈ ಬಾರಿ ಒತ್ತಡ ಹೆಚ್ಚಾಯಿತು. ಮುಂದಿನ ದಿನಗಳಲ್ಲಿ ಈ ಕೊರತೆ ನೀಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ವ್ಯಾಕ್ಸಿನ್ ಕೊರತೆ ಇರುವುದು ನಿಜ. ಮುಂದಿನ ದಿನಗಳಲ್ಲಿ ವ್ಯಾಕ್ಸಿನ್ ಸರಬರಾಜು ಆಗಲಿದೆ. ಈಗ ನೀಡಿರುವ ವ್ಯಾಕ್ಸಿನ್ಅನ್ನು ಸ್ಥಳದಲ್ಲಿಯೇ ಆನ್ಲೈನ್ನಲ್ಲಿ ದಾಖಲು ಮಾಡಲಾಗುತ್ತಿದೆ. ವ್ಯವಸ್ಥಿತವಾಗಿ ಸರಬರಾಜು ಆಗುವ ವ್ಯಾಕ್ಸಿನ್ ನೀಡಲಾಗುತ್ತಿದೆ ಎಂದರು.
ಓದಿ: ಕರುನಾಡಿಗೆ ಕರಿ ಮಾರಿ ಕಾಟ: ಇದುವರೆಗೆ ಕಪ್ಪು ಶಿಲೀಂಧ್ರಕ್ಕೆ ರಾಜ್ಯದಲ್ಲಿ 12 ಮಂದಿ ಬಲಿ