ETV Bharat / city

ತನ್ನ ವಿರುದ್ಧ ಗುಸುಗುಸು ಮಾತು: ಕೆಂಡಮಂಡಲರಾಗಿ ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದೋದ್ರು ಸಚಿವ ಮಧುಸ್ವಾಮಿ - ಸಂಸದ ಬಸವರಾಜ್ ಭೈರತಿ ಬಸವರಾಜ್ ಸುದ್ದಿಗೋಷ್ಠಿ

ತುಮಕೂರಿನ ಮಹಾನಗರ ಪಾಲಿಕೆ ಆವರಣದಲ್ಲಿ ನಡೆದ ಮಾಧ್ಯಮಗೋಷ್ಟಿಗೂ ಮುನ್ನ ಸಂಸದ ಬಸವರಾಜು​ ಅವರು ಸಚಿವ ಭೈರತಿ ಬಸವರಾಜ್​ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ವಿರುದ್ಧ ಗುಸುಗುಸು ಮಾತನಾಡಿದ್ದರು. ಈ ವಿಡಿಯೋ ವೈರಲ್​ ಆದ ಹಿನ್ನೆಲೆ ಕೆಂಡಾಮಂಡಲರಾದ ಮಾಧುಸ್ವಾಮಿ, ಕಾರ್ಯಕ್ರಮದ ಮಧ್ಯದಲ್ಲಿಯೇ ವೇದಿಕೆಯಿಂದ ಇಳಿದು ಹೊರಟು ಹೋದರು.

ಮಾಧುಸ್ವಾಮಿ
ಮಾಧುಸ್ವಾಮಿ
author img

By

Published : Jan 6, 2022, 2:27 PM IST

ತುಮಕೂರು: ಇಂದು ಬೆಳಗ್ಗೆ ತುಮಕೂರಿನ ಮಹಾನಗರ ಪಾಲಿಕೆ ಆವರಣದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಸಂಸದ ಬಸವರಾಜು ಅವರು ಸಚಿವ ಭೈರತಿ ಬಸವರಾಜ್​ ಬಳಿ ನಡೆಸಿದ ಗುಸು ಗುಸು ಮಾತು ಸಚಿವ ಮಾಧುಸ್ವಾಮಿಗೆ ಬೇಸರ ತರಿಸಿದೆ. ತಮ್ಮ ವಿರುದ್ಧ ಗುಸುಗುಸು ಮಾತನಾಡಿದ್ದಕ್ಕೆ ಕೆಂಡಾಮಂಡಲರಾಗಿದ್ದಾರೆ.

ಮಾಧ್ಯಮಗೋಷ್ಟಿಯ ನಂತರ ಮಹಾನಗರ ಪಾಲಿಕೆ ಆವರಣದಲ್ಲಿ ನಿರ್ಮಿಸಿರುವ ನೂತನ ಆಡಳಿತ ಕಚೇರಿ ಕಟ್ಟಡ ಉದ್ಘಾಟನೆ, ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಕೊಳಗೇರಿ ಪ್ರದೇಶದ ನಿವಾಸಿಗಳಿಗೆ ಪುನರ್‌ವಸತಿ ಯೋಜನೆಯಡಿ ಮಾರಿಯಮ್ಮ ನಗರದಲ್ಲಿ ನಿರ್ಮಿಸಿರುವ ವಸತಿ ಸಂಕೀರ್ಣ ಉದ್ಘಾಟನೆ, ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ನಿರ್ಮಿಸಿರುವ ನೂತನ ಸಭಾಂಗಣ, ಪ್ರಯೋಗಾಲಯ ಹಾಗೂ ಗ್ರಂಥಾಲಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಮಾಧುಸ್ವಾಮಿ ಕೂಡ ಭಾಗವಹಿಸಿದ್ದರು. ಇಬ್ಬರು ಮಾತನಾಡಿದ ವಿಡಿಯೋ ವೈರಲ್ ವಿಷಯ ತಿಳಿಯುತ್ತಿದ್ದಂತೆ ಸಚಿವ ಮಾಧುಸ್ವಾಮಿ ಕೆಂಡಾಮಂಡಲರಾಗಿ ಕಾರ್ಯಕ್ರಮದ ಮಧ್ಯದಲ್ಲಿಯೇ ವೇದಿಕೆಯಿಂದ ಇಳಿದು ಹೊರಟು ಹೋದರು.

ಕೆಂಡಮಂಡಲರಾಗಿ ಕಾರ್ಯಕ್ರಮದಿಂದ ಅರ್ಧಕ್ಕೆ ಹೊರಟ ಸಚಿವ ಮಾಧುಸ್ವಾಮಿ

ಈ ವೇಳೆ ಶಾಸಕ ಜ್ಯೋತಿ ಗಣೇಶ್​ ಹಾಗೂ ಸಚಿವ ಭೈರತಿ ಬಸವರಾಜ್ ಅವರು ಅವರು ಮೈಕ್ ಹಿಡಿದು ಸಚಿವ ಮಾಧುಸ್ವಾಮಿ ಅವರು ವಾಪಸ್ ಬರಬೇಕೆಂದು ಕಾರ್ಯಕ್ರಮದಲ್ಲಿ ಮನವಿ ಮಾಡಿದರು. ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ ಮಾಧುಸ್ವಾಮಿ, ತಮ್ಮ ಕಾರನ್ನು ಹತ್ತಿ ಹೊರಟು ಹೋದರು. ಒಂದು ರೀತಿ ಕಾರ್ಯಕ್ರಮದ ತುಂಬೆಲ್ಲಾ ನಾಟಕೀಯ ವಾತಾವರಣ ನಿರ್ಮಾಣವಾಗಿತ್ತು.

ಓದಿ: ನಮ್ಮ ಮಂತ್ರಿ ಕೊರಿಯಾದ ಕಿಂಗ್​ಪಿನ್​ ಇದ್ದಂಗೆ: ಮಾಧ್ಯಮಗೋಷ್ಟಿಯಲ್ಲೇ ಸಂಸದ ಬಸವರಾಜು ಗುಸು-ಗುಸು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.