ETV Bharat / city

ಮೂರು ವರ್ಷಗಳಿಂದ ಕತ್ತಲೆ ಕೋಣೆಯಲ್ಲಿ ಬಂಧಿಯಾಗಿದ್ದ ಯುವಕ ಬಂಧಮುಕ್ತ

ಮೂರು ವರ್ಷದಿಂದ ಗ್ರಾಮದಲ್ಲಿ ಪಾಳುಬಿದ್ದಿದ್ದ ಕೊಠಡಿಯಲ್ಲಿ ಬಂಧಿಯಾಗಿದ್ದ ಮಾನಸಿಕ ಅಸ್ವಸ್ಥನನ್ನು ರಕ್ಷಿಸಿದ ಅಧಿಕಾರಿಗಳು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

mentally-unstable-person-released-and-admits-to-hospital-in-tumkuru
ಮೂರು ವರ್ಷಗಳಿಂದ ಕತ್ತಲೆ ಕೋಣೆಯಲ್ಲಿ ಬಂಧಿಯಾಗಿದ್ದ ಯುವಕ ಬಂಧಮುಕ್ತ
author img

By

Published : Oct 5, 2021, 1:21 PM IST

ತುಮಕೂರು: ಸತತವಾಗಿ ಮೂರು ವರ್ಷಗಳಿಂದ ಕೊಠಡಿಯೊಂದರಲ್ಲಿ ಬಂಧಿಯಾಗಿದ್ದ ಮಾನಸಿಕ ಅಸ್ವಸ್ಥನನ್ನು ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಸಿದ್ದಲಿಂಗೇಗೌಡ ಅವರು ಜಿಲ್ಲಾಡಳಿತದ ನೆರವಿನೊಂದಿಗೆ ವಿಮುಕ್ತಿಗೊಳಿಸುವಲ್ಲಿ ಯಶಸ್ವಿಯಾದರು. ಈ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.

ಕುಣಿಗಲ್ ತಾಲೂಕಿನ ಯಲಗಲವಾಡಿ ಗ್ರಾಮದ ವೇದಮೂರ್ತಿ ಮತ್ತು ಗೌರಮ್ಮ ದಂಪತಿಯ ಮಗ ನವೀನ್ ಮೂರು ವರ್ಷದಿಂದ ಗ್ರಾಮದಲ್ಲಿ ಪಾಳುಬಿದ್ದಿದ್ದ ಕೊಠಡಿಯಲ್ಲಿ ಬಂಧಿಯಾಗಿದ್ದ. ದಾಯಾದಿಗಳು ಆಸ್ತಿ ಕಲಹದಿಂದ ಈತನಿಗೆ ಹುಚ್ಚನ ಪಟ್ಟ ಕಟ್ಟಿ ಮಾನಸಿಕ ಅಸ್ವಸ್ಥನಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಯುವಕ ಬಂಧಮುಕ್ತ

ಈ ಸಂಬಂಧ ನವೀನ್ ಗ್ರಾಮದಲ್ಲಿ ಕೈಗೆ ಸಿಕ್ಕ ವಸ್ತುಗಳನ್ನು ಎಲ್ಲರ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದನು. ಹೀಗಾಗಿ ಇದನ್ನು ಸ್ವತಃ ಆತನ ತಾಯಿ ಗೌರಮ್ಮ ತಮ್ಮ ಮನೆಯ ಪಾಳುಬಿದ್ದ ಕತ್ತಲೆಯ ಕೋಣೆಯಲ್ಲಿ ಮೂರು ವರ್ಷದಿಂದ ಕೂಡಿ ಹಾಕಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.

ಈ ವಿಷಯವನ್ನು ತಿಳಿದ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಸಿದ್ದಲಿಂಗೇಗೌಡ ಅವರು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ದೂರು ನೀಡಿದ್ದರು. ದೂರು ಪರಿಗಣಿಸಿದ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಯುವಕನನ್ನು ಪಾರು ಮಾಡಲು ಮುಂದಾಗಿತ್ತು.

ಸ್ಥಳಕ್ಕೆ ತೆರಳಿದ ತಹಶೀಲ್ದಾರ್​​ ಮಹಾಬಲೇಶ್ವರ ಹಾಗೂ ತಾಲೂಕು ಆರೋಗ್ಯಾಧಿಕಾರಿ ಜಗದೀಶ್ ಅವರು ತಮ್ಮ ಸಿಬ್ಬಂದಿಸಮೇತ ಯಲಗಲವಾಡಿ ಗ್ರಾಮಕ್ಕೆ ತೆರಳಿ ಗೌರಮ್ಮನವರ ಮನವೊಲಿಸಿ ಕತ್ತಲ ಕೋಣೆಯಲ್ಲಿ ಬಂಧಿಯಾಗಿದ್ದ ಯುವಕ ನವೀನನನ್ನು ಬಿಡುಗಡೆಗೊಳಿಸಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ರೈತರ ಮೇಲೆ ಕಾರು ಹರಿಸಿದ ಪ್ರಕರಣ: ವಿಡಿಯೋ ಹಂಚಿಕೊಂಡ ಪ್ರಿಯಾಂಕಾ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.