ETV Bharat / city

ಸಾವಿನ ಅನುಭವ ಬೇಕು ಅಂತಾ ಟಿಕ್​ಟಾಕ್​ ಮಾಡ್ದ ಯುವಕ... ಮುಂದೇನಾಯ್ತು ಗೊತ್ತಾ?! - ಯುವಕನ ಸಾವಿನ ಅನುಭವದ ಸುದ್ದಿ

ಜೀವನದಲ್ಲಿ ಒಂದು ಸಾರಿ ಸಾಯ್ಬೇಕು. ಅದರ ಅನುಭವ ಹೇಗಿದೆ ಎಂದು ನನಗೆ ಗೊತ್ತಾಗಬೇಕು. ಹೀಗಾಗಿ ಸಾಯೋದಕ್ಕೆ ಟ್ರೈ ಮಾಡುತ್ತಿದ್ದೇನೆ. ಅದನ್ನು ನೀವು ನೋಡ್ಬೇಕು ಎಂದು ಟಿಕ್​ ಟಾಕ್​ ವಿಡಿಯೋ ಮಾಡಿ ಯುವಕನೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತುಮಕೂರು ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

Man commits suicide after making tik tok video
ಧನಂಜಯ
author img

By

Published : Jun 7, 2020, 1:03 PM IST

ತುಮಕೂರು: ಸಾವಿನ ಅನುಭವ ಪಡೆಯಲು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಯುವಕನೊಬ್ಬ ಟಿಕ್ ಟಾಕ್ ವಿಡಿಯೋ ಮಾಡಿ ವಿಷ ಸೇವಿಸಿರೋ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಗೌರಗಾನಹಳ್ಳಿಯಲ್ಲಿ ನಡೆದಿದೆ.

Man commits suicide after making tik tok video
ಆತ್ಮಹತ್ಯೆ ಮಾಡಿಕೊಂಡ ಯುವಕ

ಧನಂಜಯ(25) ಆತ್ಮಹತ್ಯೆಗೆ ಶರಣಾಗಿರುವ ಯುವಕ. ಟಿಕ್​ಟಾಕ್​ ವಿಡಿಯೋ ಮಾಡಿದ ಬಳಿಕ ತನ್ನ ಹೊಲದಲ್ಲಿ ಕೀಟನಾಶಕ ಸೇವಿಸಿದ್ದಾನೆ. ತೀವ್ರ ಅನಾರೋಗ್ಯದ ಹಿನ್ನೆಲೆ ಕೊರಟಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಟಿಕ್​ಟಾಕ್​ ವಿಡಿಯೋ

ಸಾಯುವ ಮುನ್ನ ಟಿಕ್ ಟಾಕ್ ವಿಡಿಯೋ ಮಾಡಿರೋ ಯುವಕ, ಸಾವಿನ ಅನುಭವ ಪಡೆಯಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾನೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.