ತುಮಕೂರು: ತುಮಕೂರಿನ ಕೊರಟಗೆರೆ ತಾಲೂಕಿನ ಅನುಪಲು ಗ್ರಾಮದಲ್ಲಿ ಎರಡು ಚಿರತೆಗಳು ನಡೆಸಿದ ದಾಳಿಗೆ, 11 ಮೇಕೆಗಳು ಬಲಿಯಾಗಿವೆ.
ರಂಗನಾಥ್ ಎಂಬುವರಿಗೆ ಸೇರಿದ ಮೇಕೆಗಳಾಗಿದ್ದು, ಸಾವಿರಾರು ರೂ. ನಷ್ಟ ಸಂಭವಿಸಿದೆ. ಮೇಕೆಗಳನ್ನು ಕಟ್ಟಿದ್ದ ಕೊಟ್ಟಿಗೆ ಮೇಲೆ ರಾತ್ರಿ ಎರಡು ಚಿರತೆ ದಾಳಿ ನಡೆಸಿವೆ. ಸ್ಥಳಕ್ಕೆ ಕೊರಟಗೆರೆ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.