ತುಮಕೂರು : ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ನವರು ತೊಂದರೆ ಕೊಟ್ಟಿದ್ದರು. ಕುಮಾರಸ್ವಾಮಿ ಸರ್ಕಾರವನ್ನು ಕಾಂಗ್ರೆಸ್ನವರು ಬೀಳಿಸಿಲ್ಲ ಎಂದು ಶ್ರೀ ಸಿದ್ಧಗಂಗಾ ಮಠದಲ್ಲಿ ಬಂದು ಪರಮೇಶ್ವರ್ ಪ್ರಮಾಣ ಮಾಡಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಸವಾಲು ಹಾಕಿದರು.
ತುಮಕೂರಿನಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ. ಜಿಲ್ಲಾ, ತಾಲೂಕು ಮಟ್ಟದಲ್ಲಿ ಕಾರ್ಯಕರ್ತರು, ನಾಯಕರ ಸಭೆ ಮಾಡಿ ಪ್ರತಿಯೊಬ್ಬರಿಗೆ ಒಂದೊಂದು ಜವಾಬ್ದಾರಿ ನೀಡಲಾಗುವುದು ಎಂದರು.
ಇಡೀ ರಾಜ್ಯ 94ರಲ್ಲಿ ಹೇಗೆ ದೇವೇಗೌಡ ಎಂದು ಕೂಗಿತೋ ಹಾಗೆ 23ರಲ್ಲಿ ಕುಮಾರಸ್ವಾಮಿ ಎಂದು ಇಡೀ ರಾಜ್ಯ ಕೂಗುತ್ತದೆ. ಆ ಕೂಗನ್ನು ನೀವು ಕೇಳುತ್ತೀರಿ. ಕುಮಾರಸ್ವಾಮಿ ಅವರಿಗೆ ಇಡೀ ರಾಜ್ಯದ ಜನತೆ ಬೆಂಬಲ ನೀಡುತ್ತಾರೆ ಎಂದು ಸಿ ಎಂ ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಜೆಡಿಎಸ್ ಹಳೆಯ ಪಕ್ಷ, ಮುಂದಿನ ಬಾರಿ ನಮ್ದೇ ಸರ್ಕಾರ, ಹೆಚ್‌ಡಿಕೆನೇ ಸಿಎಂ.. ಇಬ್ರಾಹಿಂ