ETV Bharat / city

ತುಮಕೂರು: ಶ್ರೀರಾಮ ನವಮಿ ದಿನದಂದೇ ಆಂಜನೇಯ ದೇವಾಲಯದ ಹುಂಡಿ ಕಳ್ಳತನ - hundi theft in anjaneya swamy temple in tumkur

ಶ್ರೀರಾಮ ನವಮಿಯಂದೇ ತುಮಕೂರು ಜಿಲ್ಲೆಯ ತಿಪಟೂರು ನಗರದ ಆಂಜನೇಯಸ್ವಾಮಿ ದೇವಾಲಯದಲ್ಲಿ ಖದೀಮರು ಹುಂಡಿ ಕಳ್ಳತನ ಮಾಡಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.

ಆಂಜನೇಯ ದೇವಾಲಯದ ಹುಂಡಿ ಕಳ್ಳತನ
ಆಂಜನೇಯ ದೇವಾಲಯದ ಹುಂಡಿ ಕಳ್ಳತನ
author img

By

Published : Apr 11, 2022, 11:01 AM IST

ತುಮಕೂರು: ಜಿಲ್ಲೆಯ ತಿಪಟೂರು ನಗರದ ವಿನೋದ ಚಿತ್ರಮಂದಿರದ ಪಕ್ಕದಲ್ಲಿರುವ ವೀರ ಆಂಜನೇಯ ದೇವಾಲಯದಲ್ಲಿ ಶ್ರೀರಾಮ ನವಮಿ ದಿನದಂದೇ ಹುಂಡಿ ಕಳ್ಳತನವಾಗಿದೆ. ತಡ ರಾತ್ರಿ ಮೇಲ್ಛಾವಣಿ ಮುರಿದು ಒಳನುಗ್ಗಿದ ಖದೀಮರು ಹುಂಡಿ ಹೊತ್ತುಕೊಂಡು ಹೋಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ದೇವಾಲಯದ ಅರ್ಚಕ ದರ್ಶನ್, ಭಾನುವಾರ ರಾಮ ನವಮಿ ಆಚರಣೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಾಲಯಕ್ಕೆ ಆಗಮಿಸಿದ್ದರು. ನಿನ್ನೆ ತಡರಾತ್ರಿ ದೇವಾಲಯದ ಮೇಲ್ಭಾಗದಿಂದ ಇಳಿದಿರುವ ಕಳ್ಳರು ಹುಂಡಿ ಸೇರಿದಂತೆ ದೇವರಿಗೆ ಹಾಕಿದ ಬೆಲೆ ಬಾಳುವ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಪೂಜೆಗೆ ಬಂದಾಗ ಖದೀಮರ ಕೃತ್ಯ ಬೆಳಕಿಗೆ ಬಂದಿದೆ ಎಂದರು.

ಆಂಜನೇಯ ದೇವಾಲಯದ ಹುಂಡಿ ಕಳ್ಳತನ

ದೇವಾಲಯದ ಪಕ್ಕದಲ್ಲಿ ಹುಂಡಿ ಬಿದ್ದಿದ್ದು, ಹಣ ತೆಗೆದುಕೊಂಡು ಖದೀಮರು ಪರಾರಿಯಾಗಿದ್ದಾರೆ. ಹುಂಡಿಯಲ್ಲಿ ಸುಮಾರು 5-6 ಸಾವಿರ ರೂ. ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ತಿಪಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಿ, ಬೆಂಕಿ ಹಚ್ಚಿದ ಕಿಡಿಗೇಡಿಗಳು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.