ETV Bharat / city

ಕಾಂಗ್ರೆಸ್​ನವರು ಸಮವಸ್ತ್ರ ವಿರೋಧಿಸಿ ಹಿಜಾಬ್ ಸ್ವಾಗತಿಸುತ್ತಿದ್ದಾರೆ: ಆರಗ ಜ್ಞಾನೇಂದ್ರ - ಕಾಂಗ್ರೆಸ್​ ವಿರುದ್ಧ ಆರಗ ಜ್ಞಾನೇಂದ್ರ ಆಕ್ರೋಶ

ಕಾಂಗ್ರೆಸ್​ವರು ಸಮವಸ್ತ್ರ ವಿರೋಧಿಸುತ್ತಾರೆ, ಹಿಜಾಬ್ ಅನ್ನು ಸ್ವಾಗತಿಸುತ್ತಿದ್ದಾರೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Home minister Araga Jnanendra
ಗೃಹ ಸಚಿವ ಅರಗ ಜ್ಞಾನೇಂದ್ರ
author img

By

Published : Mar 26, 2022, 9:31 AM IST

ತುಮಕೂರು: ಕಾಂಗ್ರೆಸ್​ವರು ಸಮವಸ್ತ್ರ ವಿರೋಧಿಸುತ್ತಾರೆ, ಹಿಜಾಬ್ ಅನ್ನು ಸ್ವಾಗತಿಸುತ್ತಿದ್ದಾರೆ. ಬಹಳ ವರ್ಷದಿಂದಲೇ ಇದನ್ನು ಮಾಡಿಕೊಂಡು ಬಂದಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನ ಈ ನಡೆಯಿಂದಲೇ ದೇಶದ ಜನ ಕಾಂಗ್ರೆಸ್ ಪಕ್ಷಕ್ಕೆ ಅವರ ಜಾಗ ಯಾವುದು ಎಂದು ತೋರಿಸುತ್ತಿದ್ದಾರೆ. ಸತ್ಯ ಹೇಳಲು ತಯಾರಿಲ್ಲ, ನಿಷ್ಟುರವಾಗಿ ಹೇಳಲು ತಯಾರಿಲ್ಲ. ತಮ್ಮ ವೋಟ್ ಬ್ಯಾಂಕ್​​ ಗಟ್ಟಿ ಮಾಡಿಕೊಳ್ಳಲು ಇಂತಹ ಆಟಗಳನ್ನಾಡುತ್ತಿದ್ದಾರೆ ಎಂದು ಟೀಕಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ

ಇದನ್ನೂ ಓದಿ: ರಫ್ತು ಸನ್ನದ್ಧತೆ ಶ್ರೇಯಾಂಕ ಬಿಡುಗಡೆ: ಕರ್ನಾಟಕಕ್ಕೆ 3ನೇ ಸ್ಥಾನ

ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚುವುದು ಬೆಳಕಿಗೆ ಬಂದಿದೆ. ಇನ್ನು ಕರ್ನಾಟಕದಲ್ಲಿ ಆಕ್ಸಿಜನ್ ಸಹಾಯದಿಂದ ಕಾಂಗ್ರೆಸಿಗರು ಉಸಿರಾಡುತ್ತಿದ್ದಾರೆ. ಆಕ್ಸಿಜನ್ ಅನ್ನು ಕೂಡ ಮತದಾರರು ಕಿತ್ತು ಹಾಕಲಿದ್ದಾರೆ ಎಂದು ಹೇಳಿದರು. ಇನ್ನೂ ದೇವಸ್ಥಾನದ ಆವರಣದಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಇಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟ ಪಡಿಸಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.