ETV Bharat / city

ಹುಚ್ಚು ಹಿಡಿದವರು ಮಾತ್ರ ಬಿಜೆಪಿಯಿಂದ ಕಾಂಗ್ರೆಸ್​​ಗೆ ವಲಸೆ ಹೋಗ್ತಾರೆ: ಸಚಿವ ಆರಗ ಜ್ಞಾನೇಂದ್ರ

ಬುದ್ಧಿ ನೆಟ್ಟಗೆ ಇರುವವರು ಯಾರೂ ಕೂಡ ಕಾಂಗ್ರೆಸ್​ಗೆ​ ಹೋಗುವುದಿಲ್ಲ. ಸಚಿವರಾದ ಮಾಧುಸ್ವಾಮಿ ಹಾಗೂ ಅಶೋಕ್ ಅವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನಗಳನ್ನು ನೀಡದಿರುವುದರ ಹಿಂದೆ ಪಕ್ಷವು ಅವರನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳುವ ಚಿಂತನೆ ಇರಬಹುದು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

home-minister-araga-jnanendra-in-tumkur
ಹುಚ್ಚು ಹಿಡಿದವರು ಮಾತ್ರ ಬಿಜೆಪಿಯಿಂದ ಕಾಂಗ್ರೆಸ್​​ಗೆ ವಲಸೆ ಹೋಗುತ್ತಾರೆ: ಸಚಿವ ಆರಗ ಜ್ಞಾನೇಂದ್ರ
author img

By

Published : Jan 26, 2022, 1:38 PM IST

ತುಮಕೂರು: ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರವಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಪಕ್ಷದಿಂದ ಕಾಂಗ್ರೆಸ್​ಗೆ ಹುಚ್ಚು ಹಿಡಿದವರು ಮಾತ್ರ ವಲಸೆ ಹೋಗುತ್ತಾರೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬುದ್ಧಿ ನೆಟ್ಟಗೆ ಇರುವವರು ಯಾರೂ ಕೂಡ ಕಾಂಗ್ರೆಸ್​ಗೆ​ ಹೋಗುವುದಿಲ್ಲ. ಸಚಿವರಾದ ಮಾಧುಸ್ವಾಮಿ ಹಾಗೂ ಅಶೋಕ್ ಅವರುಗಳಿಗೆ ಜಿಲ್ಲಾ ಉಸ್ತುವಾರಿ ಸ್ಥಾನಗಳನ್ನು ನೀಡದಿರುವುದರ ಹಿಂದೆ ಪಕ್ಷವು ಅವರನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳಲು ಚಿಂತನೆ ಇರಬಹುದು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸಚಿವ ಆರಗ ಜ್ಞಾನೇಂದ್ರ

ಮುಖ್ಯಮಂತ್ರಿಗಳಿಗೆ ಅವರಿಬ್ಬರು ತುಂಬಾ ಆಪ್ತರಾಗಿದ್ದಾರೆ. ತುಮಕೂರು ಜಿಲ್ಲಾ ಉಸ್ತುವಾರಿ ಅವಕಾಶ ನನಗೆ ನಿರೀಕ್ಷೆಯಿರಲಿಲ್ಲ. ತುಮಕೂರು ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಯಾಗಿದೆ. ಅಲ್ಲದೇ ಪ್ರಬುದ್ಧ ಜನಪ್ರತಿನಿಧಿಗಳು ಜಿಲ್ಲೆಯಲ್ಲಿದ್ದಾರೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ. ಜಿಲ್ಲೆಯ ಪ್ರಗತಿಗೆ ಪೂರಕವಾಗಿ ಕೆಲಸ ಮಾಡಲು ತೊಂದರೆಯಾಗುವುದಿಲ್ಲ ಎಂದರು.

ತಪೋ ಭೂಮಿಯಲ್ಲಿ ಧ್ವಜಾರೋಹಣ ನಡೆಸಿರುವುದು ನನ್ನ ಭಾಗ್ಯ: ಗಣರಾಜ್ಯೋತ್ಸವದ ನಿಮಿತ್ತ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಧ್ವಜಾರೋಹಣ ನೆರವೇರಿಸಿ ಮಠದ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು.

ಸಿದ್ದಗಂಗಾ ಮಠದಲ್ಲಿ ಧ್ವಜಾರೋಹಣ ನಡೆಸಿ ಬಳಿಕ ಆರ್​ಎಸ್​ಎಸ್ ಕಚೇರಿಗೆ ಭೇಟಿ ನೀಡಿದ ಸಚಿವರು, ಜೂನಿಯರ್ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಂತರ ಮಾತನಾಡಿದ ಸಚಿವರು, ನನ್ನ ಜೀವನದಲ್ಲಿ ಅತಿ ಅಪರೂಪದ ಕ್ಷಣವಿದು. ಮಂಗಳವಾರ ಸಿಎಂ ತುಮಕೂರು ಜಿಲ್ಲಾ ಉಸ್ತುವಾರಿಯನ್ನು ನನಗೆ ವಹಿಸಿದ್ದರು. ಈ ತಪೋ ಭೂಮಿಯಲ್ಲಿ ಧ್ವಜಾರೋಹಣ ನಡೆಸಿರುವುದು ನನ್ನ ಭಾಗ್ಯ ಎಂದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಜನವರಿ 26ರ ದಿನ ನಮ್ಮೆಲ್ಲರ ಹೆಮ್ಮೆಯ ದಿನ. ರಾಷ್ಟ್ರ ನಮಗೇನು ಕೊಟ್ಟಿದೆ ಎಂಬ ಚಿಂತನೆ ನಡುವೆ ಇಲ್ಲೊಬ್ಬ ಯೋಗಿ ರಾಷ್ಟ್ರಕ್ಕೆ ಏನು ಕೊಡಬೇಕು ಎಂದು ಯೋಚಿಸಿದ್ದಾರೆ. ರಾಷ್ಟ್ರಕ್ಕೆ ದುಡಿಯಿರಿ ಎಂಬ ಸಂದೇಶ ಕೊಟ್ಟ ಯೋಗಿಯ ಬಗ್ಗೆ ವಿಶ್ವ ನೋಡುತ್ತಿದೆ. ಮಠದಲ್ಲಿ ಧ್ವಜಾರೋಹಣ ನಡೆಸಿರುವುದು ನನಗೆ ಮರೆಯಲಾರದ ಕ್ಷಣವಾಗಿದೆ ಎಂದರು.

ಇದನ್ನೂ ಓದಿ: ಹುಬ್ಬಳ್ಳಿಯ ಚಿಟಗುಪ್ಪಿ ಗಾರ್ಡನ್​​ನಲ್ಲಿ ಹಾಡಹಗಲೇ ಪ್ರೇಮಿಗಳ ರೊಮ್ಯಾನ್ಸ್: ವಿಡಿಯೋ ವೈರಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.