ETV Bharat / city

ತುಮಕೂರು: ಭಾರಿ ಮಳೆಗೆ ಗುಡ್ಡ ಕುಸಿತ - ಸಂಚಾರ ಅಸ್ತವ್ಯಸ್ತ!

ತುಮಕೂರು ತಾಲೂಕಿನ ಹೊರವಲಯದಲ್ಲಿರುವ ದೇವರಾಯನದುರ್ಗದ ಬೆಟ್ಟದಲ್ಲಿ ಗುಡ್ಡ ಕುಸಿತವಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ‌

Hill collapsed due to heavy rain in tumakuru
ಭಾರಿ ಮಳೆಗೆ ಗುಡ್ಡ ಕುಸಿತ
author img

By

Published : Oct 12, 2021, 2:46 PM IST

ತುಮಕೂರು: ರಾತ್ರಿಯಿಡಿ ಸುರಿದ ಭಾರಿ ಮಳೆಗೆ ತುಮಕೂರು ತಾಲೂಕಿನ ಹೊರವಲಯದಲ್ಲಿರುವ ದೇವರಾಯನದುರ್ಗದ ಬೆಟ್ಟದಲ್ಲಿ ಗುಡ್ಡ ಕುಸಿತವಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ‌

ಭಾರಿ ಮಳೆಗೆ ಗುಡ್ಡ ಕುಸಿತ

ಯೋಗನರಸಿಂಹ ಸ್ವಾಮಿ ದೇವಾಲಯಕ್ಕೆ ತೆರಳುವ ರಸ್ತೆ ರಸ್ತೆಗೆ ಅಡ್ಡಲಾಗಿ ಬಂಡೆಗಳು ಕುಸಿದುಬಿದ್ದಿವೆ. ಪರಿಣಾಮ, ಸಂಚಾರ ಸ್ಥಗಿತಗೊಂಡು, ಪ್ರಯಾಣಿಕರಿಗೆ, ಭಕ್ತರಿಗೆ ಸಮಸ್ಯೆಯಾಗಿದೆ. ದೇವಾಲಯದ ಅರ್ಚಕರಿಗೆ ಮಾತ್ರ ಬೆಟ್ಟಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ನಂಜನಗೂಡಲ್ಲಿ ಡೆತ್ ನೋಟ್ ಬರೆದಿಟ್ಟು ಅಬಕಾರಿ ಕಾನ್ಸ್‌ಟೇಬಲ್ ಆತ್ಮಹತ್ಯೆ

ಸ್ಥಳಕ್ಕೆ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಾಲಯಕ್ಕೆ ತೆರಳುವ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಲೋಕೋಪಯೋಗಿ ಇಲಾಖೆಯವರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಬಂಡೆಗಳನ್ನು ಸ್ಥಳಾಂತರಿಸಲು ಸಿದ್ಧತೆ ನಡೆಸಿದ್ದಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.