ETV Bharat / city

ತುಮಕೂರಿನಿಂದಲೇ ದೊಡ್ಡಗೌಡರ ಸ್ಪರ್ಧೆ: ಮಾರ್ಚ್​ 25ರಂದು ನಾಮಪತ್ರ ಸಲ್ಲಿಕೆ - ತುಮಕೂರು

ಮಾಜಿ ಪ್ರಧಾನಿ ದೇವೇಗೌಡರು ಮಾರ್ಚ್​ 25ರಂದು ತುಮಕೂರಿನಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್. ಶ್ರೀನಿವಾಸ್ ಹೇಳಿದರು.

ದೇವೇಗೌಡರು ಮಾರ್ಚ್​ 25ರಂದು ತುಮಕೂರಿನಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎಂದ ಸಚಿವ ಎಸ್.ಆರ್. ಶ್ರೀನಿವಾಸ್
author img

By

Published : Mar 23, 2019, 5:29 PM IST

ತುಮಕೂರು: ಜಿಲ್ಲೆಯ ಜೆಡಿಎಸ್ ಮುಖಂಡರ ಒತ್ತಾಯಕ್ಕೆ ಮಣಿದ ದೇವೇಗೌಡರು ತುಮಕೂರಿನಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಇದೇ ತಿಂಗಳ 25ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್. ಶ್ರೀನಿವಾಸ್ ಮಾಹಿತಿ ನೀಡಿದರು.

'ಈ ಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಒಪ್ಪಂದದ ಅನ್ವಯ ಮೈಸೂರು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಡುವಂತೆ ಕೇಳಲಾಗಿತ್ತು. ಆದರೆ ತುಮಕೂರು ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ ಎಂದರು.

ದೇವೇಗೌಡರು ಮಾರ್ಚ್​ 25ರಂದು ತುಮಕೂರಿನಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎಂದ ಸಚಿವ ಎಸ್.ಆರ್. ಶ್ರೀನಿವಾಸ್

ಹಾಲಿ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿರುವುದು ಸಹಜವಾಗಿ ಕಾಂಗ್ರೆಸ್​ನಲ್ಲಿ ಬೇಸರ ಮೂಡಿಸಿದೆ. ಕಾಂಗ್ರೆಸಿಗರ ಬೇಸರವನ್ನು ಶಮನಗೊಳಿಸುವುದು ಪಕ್ಷದ ನಾಯಕರ ಹಾಗೂ ಹೈಕಮಾಂಡ್​ ಕೆಲಸ. ಹೀಗಾಗಿ ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತು ಸಂಸದ ಮುದ್ದಹನುಮೇಗೌಡರೊಂದಿಗೆ ಈ ಬಗ್ಗೆ ಮಾತನಾಡಿದ್ದೇವೆ ಎಂದರು.

ರಾಜಕೀಯದ ಉದ್ದೇಶಕ್ಕೋಸ್ಕರ ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರು ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಲಾಗುತ್ತಿದೆ. ಆದ್ರೆ ನಿಗದಿಯಂತೆ ಈ ಬಾರಿ 25 ಟಿಎಂಸಿ ನೀರು ಜಿಲ್ಲೆಗೆ ಹರಿದು ಬಂದಿದೆ. ಹೇಮಾವತಿ ನಾಲಾ ಯೋಜನೆ ಪೂರ್ಣಗೊಂಡಿದ್ದು ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ. ಅಂತಹುದರಲ್ಲಿ ಸರಿಯಾದ ಅಂಕಿ ಅಂಶಗಳಿಲ್ಲದೆ ದೇವೇಗೌಡರ ವಿರುದ್ದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ಹೇಮಾವತಿ ನದಿ ನೀರು ಹರಿಯಲು ಯಾವುದೇ ತೊಂದರೆಯಾಗಿಲ್ಲ. ಹೇಮಾವತಿ ಚಾನೆಲ್​ಗಳ ಅಭಿವೃದ್ಧಿಗೋಸ್ಕರ ಈಗಾಗಲೇ ಮೈತ್ರಿ ಸರ್ಕಾರದಲ್ಲಿ ಹಣವನ್ನು ಕೂಡ ನಿಗದಿಪಡಿಸಲಾಗಿದೆ. ಹೇಮಾವತಿ ನದಿ ನೀರು ಯೋಜನೆ ಪ್ರದೇಶ ಹೊರತುಪಡಿಸಿ ಬೇರೆಡೆ ನೀರು ಬಂದಿಲ್ಲ ಎಂದು ಹೇಳುವ ಮೂಲಕ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಹೇಮಾವತಿ ನದಿ ನೀರಿನ ಕಳ್ಳತನವಾಗುತ್ತಿದೆ. ಮಾಜಿ ಸಂಸದ ಜಿ.ಎಸ್​. ಬಸವರಾಜು ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಶ್ರೀನಿವಾಸ್​ ಆರೋಪಿಸಿದರು.

Intro:ಮೈಸೂರು ಲೋಕಸಭೆ ಕ್ಷೇತ್ರ ಕೇಳಿದ್ದೆವು....
ಆದ್ರೆ ಜೆಡಿಎಸ್ ಗೆ ತುಮಕೂರು ಬಿಟ್ಟು ಕೊಡಲಾಗಿದೆ.....
ಸಚಿವ ಶ್ರೀನಿವಾಸ್ ಹೇಳಿಕೆ.....

ತುಮಕೂರು
ಮೈಸೂರು ಲೋಕಸಭೆ ಕ್ಷೇತ್ರವನ್ನು ಮೈತ್ರಿ ಧರ್ಮದ ಅನ್ವಯ ಜೆಡಿಎಸ್ ಗೆ ಬಿಟ್ಟು ಕೊಡುವಂತೆ ಕೇಳಲಾಗಿತ್ತು, ಆದ್ರೆ ಕಾಂಗ್ರೆಸ್ ತುಮಕೂರು ಲೋಕಸಭೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್ ಆರ್ ಶ್ರೀನಿವಾಸ್ ತಿಳಿಸಿದ್ದಾರೆ.
ಈ ಟಿವಿ ಭಾರತ್ ಜೊತೆ ಮಾತನಾಡಿದ ಅವರು, ಅಲ್ಲದೆ ಜಿಲ್ಲೆಯ ಎಲ್ಲಾ ಜೆಡಿಎಸ್ ಮುಖಂಡರು ಒತ್ತಾಯ ಮಾಡಿದ್ದರಿಂದ ದೇವೇಗೌಡರು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದರು.

ಹಾಲಿ ಕಾಂಗ್ರೆಸ್ ಸಂಸದ ಮುದ್ದಹಾನುಮೇಗೌಡರಿಗೆ ಟಿಕೆಟ್ ತಪ್ಪಿರುವುದು ಸಹಜವಾಗಿ ಕಾಂಗ್ರೆಸ್ ನಲ್ಲಿ ಬೇಸರ ಮೂಡಿಸಿದೆ. ಹೀಗಾಗಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಮತ್ತು ಸಂಸದ ಮುದ್ದಹಾನುಮೇಗೌಡರೊಂದಿಗೆ ಚರ್ಚಿಸಿ ಮಾತನಾಡಲಾಗುವುದು. ಕಾಂಗ್ರೆಸ್ ಪಕ್ಷದ ಬ್ಲಾಕ್ ಮುಖಂಡರನ್ನು ಭೇಟಿ ಮಾಡಿ ಓಲೈಸಲಾಗುವುದು ಎಂದರು.

Body:ರಾಜಕೀಯದ ಉದ್ದೇಶಕ್ಕೋಸ್ಕರ ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರು ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಲಾಗುತ್ತಿದೆ. ಆದ್ರೆ ನಿಗಧಿಯಂತೆ ಈ ಬಾರಿ 25 ಟಿ ಎಂ ಸಿ ನೀರನ್ನು ತುಮಕೂರು ಜಿಲ್ಲೆಗೆ ಹರಿಸಲಾಗಿದೆ. ಸರಿಯಾದ ಅಂಕಿ ಅಂಶಗಳಿಲ್ಲದೆ ದೇವೇಗೌಡರ ವಿರುದ್ದ ಹೇಳಿಕೆ ನೀಡಲಾಗುತ್ತಿದೆ ಎಂದರು.

ಹೇಮಾವತಿ ನದಿ ನೀರು ಹರಿಯಲು ಯಾವುದೇ ತೊಂದರೆಯಾಗಿಲ್ಲ. ಹೇಮಾವತಿ ಚಾನೆಲ್ ಗಳ ಅಭಿವೃದ್ಧಿಗೋಸ್ಕರ ಈಗಾಗಲೇ ಮೈತ್ರಿ ಸರ್ಕಾರದಲ್ಲಿ ಹಣವನ್ನು ಕೂಡ ನಿಗದಿಪಡಿಸಲಾಗಿದೆ. ಹೇಮಾವತಿ ನದಿ ನೀರು ಯೋಜನೆ ಪ್ರದೇಶ ಹೊರತು ಪಡಿಸಿ ಬೇರೆಡೆ ನೀರು ಬಂದಿಲ್ಲ ಎಂದು ಹೇಳುವ ಮೂಲಕ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಹೇಮಾವತಿ ನದಿ ನೀರನ್ನು ಕಳ್ಳತನ ಮಾಡಲಾಗುತ್ತಿದೆ. ಅಲ್ಲದೆ ಹೇಮಾವತಿ ನಾಲಾ ಯೋಜನೆ ಪೂರ್ಣಗೊಂಡಿದ್ದೆ ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.