ತುಮಕೂರು: ಮಳೆ ಬಂದ ವೇಳೆ ಮೋರಿಯಲ್ಲಿ ಬಿದ್ದು ಸಾವನಪ್ಪಿದ ಆಟೋ ಚಾಲಕನ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಲಾಗಿದೆ. ತಹಶೀಲ್ದಾರ್ ಮೋಹನ್ ಕುಮಾರ್ ಶಾಂತಿ ನಗರದಲ್ಲಿರುವ ಅಮ್ಜಾದ್ ಖಾನ್ ಮನೆಗೆ ಭೇಟಿ ನೀಡಿ ಪರಿಹಾರದ ಚೆಕ್ ವಿತರಣೆ ಮಾಡಿದರು.
ಓದಿ: ತುಮಕೂರಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕೊಚ್ಚಿ ಹೋದ ಆಟೋ ಚಾಲಕ!
ಕಳೆದ ಶನಿವಾರ ಮಳೆ ನೀರಿನ ರಭಸದ ಸೆಳೆತಕ್ಕೆ ಸಿಲುಕಿ ಚರಂಡಿಯಲ್ಲಿ ಆಟೋ ಚಾಲಕ ಅಮ್ಜಾದ್ ಖಾನ್ ಕೊಚ್ಚಿ ಹೋಗಿದ್ದರು. 48 ಗಂಟೆ ಬಳಿಕ ಮೃತದೇಹ ಪತ್ತೆಯಾಗಿತ್ತು. ಮೃತನ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಘೋಷಿಸಲಾಗಿತ್ತು. ನಿನ್ನೆ 5 ಲಕ್ಷ ರೂ. ಅನ್ನು ಗೃಹ ಸಚಿವ ಹಾಗೂ ತುಮಕೂರು ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅವರು ತಹಶೀಲ್ದಾರ್ ಕಚೇರಿಗೆ ನೀಡಿದ್ದರು. ಅದರಂತೆ ಸಂತ್ರಸ್ತ ಕುಟುಂಬಕ್ಕೆ ಚೆಕ್ ವಿತರಣೆ ಮಾಡಲಾಯಿತು.